ಹೋಟೆಲ್ ಕನ್ನಡ, ಬೆಂಗಳೂರು: ರಾಜಧಾನಿ ಬೆಂಗಳೂರಿನ ಮಲ್ಲೇಶ್ವರದಲ್ಲಿನ ಹೆಸರಾಂತ ʼವೀಣಾ ಸ್ಟೋರ್ಸ್ʼ ಸಂಸ್ಥಾಪಕ ಎಸ್.ಡಿ. ಸೂರ್ಯನಾರಾಯಣ ಹೆಗಡೆ ಅವರು ವಿಧಿವಶರಾಗಿದ್ದು, ಅವರಿಗೆ 87 ವರ್ಷ ವಯಸ್ಸಾಗಿತ್ತು. ಹೆಗಡೆ ಅವರ ನಿಧನದ ಕುರಿತು ವೀಣಾ ಸ್ಟೋರ್ಸ್‌ನ ಇನ್‌ಸ್ಟಾಗ್ರಾಂ ಖಾತೆಯಲ್ಲಿ ಆಗಸ್ಟ್ 27ರಂದು ಪ್ರಕಟಿಸಲಾಗಿದೆ.
ಇದೂ ಓದಿ: ವಿಶ್ವ ಕುಂದಾಪ್ರ ಕನ್ನಡ ಹಬ್ಬಕ್ಕೆ ಮತ್ತೆ ʼಅರಮನೆʼಯ ರಾಜ ವೈಭೋಗ; ಕಾರಣಕರ್ತರಿವರು..
ವೀಣಾ ಸ್ಟೋರ್ಸ್ ರುಚಿಯನ್ನು ಸವಿದಿರುವ ಖ್ಯಾತ ಬಾಲಿವುಡ್ ನಟಿ ದೀಪಿಕಾ ಪಡುಕೋಣೆ, ಯೂಟ್ಯೂಬರ್ ಕೃಪಾಲ್ ಅಮನ್ನಾ ಸೇರಿದಂತೆ ಹಲವರು ಹೆಗಡೆ ಅವರ ಅಗಲಿಕೆಗೆ ಸಂತಾಪ ವ್ಯಕ್ತಪಡಿಸಿದ್ದಾರೆ.
ಇದೂ ಓದಿ: ಹೋಟೆಲೋದ್ಯಮಿಗೆ ಹೃದಯಾಘಾತ; ಮಾಜಿ ಸಚಿವರು ಸೇರಿ ಹಲವರಿಂದ ಸಂತಾಪ
ಮಲ್ಲೇಶ್ವರದ ಮಾರ್ಗೊಸಾ ರಸ್ತೆಯ ಚಿಕ್ಕ ಜಾಗದಲ್ಲಿ 1977ರಲ್ಲಿ ಸಣ್ಣ ಕಾಂಡಿಮೆಂಟ್, ಕಾಫಿ-ಟೀ ಅಂಗಡಿಯನ್ನು ಹೆಗಡೆ ಅವರು ಆರಂಭಿಸಿದ್ದರು. ಆರಂಭದಲ್ಲಿ ಕುರುಕಲು ತಿಂಡಿ, ಕಾಫಿ-ಟೀ ಮಾತ್ರ ಮಾಡಲಾಗುತ್ತಿತ್ತು. ಬಳಿಕ ಪ್ರಾಯೋಗಿಕವಾಗಿ ಇಡ್ಲಿ-ಚಟ್ನಿ ಮಾಡಲಾಯಿತು. ಕ್ರಮೇಣ ಇಡ್ಲಿ-ಚಟ್ನಿಗೆ ಬೇಡಿಕೆ ಹೆಚ್ಚಾಗುತ್ತಿದ್ದಂತೆ ವಡೆ, ಕೇಸರಿಬಾತ್, ಕಾರಾಬಾತ್ ಕೂಡ ಆರಂಭಿಸಲಾಯಿತು.
ಇದೂ ಓದಿ: ದಿಗ್ಗಜ ಹೋಟೆಲಿಗರಿಗೂ ತಿಳಿಯಲಾಗಲಿಲ್ಲ ಇದೊಂದು ರಹಸ್ಯ!; ಕೆಲವು ಹೋಟೆಲ್‌ಗಳಲ್ಲಿದೆಯಾ ‘ಸ್ಥಳ ಮಹಿಮೆʼ?
ಹೀಗೆ ʼವೀಣಾ ಸ್ಟೋರ್ಸ್ʼ ಎಂಬ ಹೆಸರಿನಲ್ಲಿ ಆರಂಭವಾದ ಅಂಗಡಿ ಅದೇ ಹೆಸರಿನಲ್ಲಿ ಹೋಟೆಲ್ ಆಗಿ ಪರಿವರ್ತನೆ ಆಯಿತು. ಖ್ಯಾತ ಪತ್ರಕರ್ತ ವೈಎನ್‌ಕೆ ಅವರಿಗೆ ನೆಚ್ಚಿನ ತಾಣವಾಗಿದ್ದ ಇಲ್ಲಿನ ತಿನಿಸುಗಳಿಗೆ ಖ್ಯಾತ ಚಿತ್ರನಟ ಪುನೀತ್ ರಾಜ್‌ಕುಮಾರ್ ಮನಸೋತಿದ್ದರು. ಚಿತ್ರನಟ ಜಗ್ಗೇಶ್ ಕೂಡ ಇಲ್ಲಿನ ತಿಂಡಿಗಳನ್ನು ಸವಿದಿದ್ದಾರೆ. ಹಲವು ವರ್ಷಗಳಿಂದ ಹೆಗಡೆ ಅವರ ಪುತ್ರ ಪ್ರದೀಪ್ ನೇತೃತ್ವದಲ್ಲಿ ವೀಣಾ ಸ್ಟೋರ್ಸ್ ಕಾರ್ಯನಿರ್ವಹಿಸುತ್ತಿದೆ.
ಇದೂ ಓದಿ: ಸುಖ್ ಸಾಗರ್ ಗ್ರೂಪ್ ಆಫ್ ಹೋಟೆಲ್ಸ್ ಸಂಸ್ಥಾಪಕ ಸುರೇಶ್ ಎಸ್. ಪೂಜಾರಿ ವಿಧಿವಶ
ಇದೂ ಓದಿ: ಕಾಫಿಗಿದೆ ಸಾವನ್ನೂ ಮುಂದೂಡುವ ಶಕ್ತಿ: ಕಾಫಿ ಹೇಗಿರಬೇಕು, ಎಷ್ಟು ಕುಡಿಯಬೇಕು?
ಇದೂ ಓದಿ: ಬೆಂಗಳೂರು ಹೋಟೆಲುಗಳ ಸಂಘದ ಸದಸ್ಯತ್ವ ಪಡೆಯುವುದು ಹೇಗೆ? ಅದಕ್ಕೆಂದೇ ಮಾಡಲಾಗಿದೆ ಹೊಸ ಸಮಿತಿ



