ಹೋಟೆಲ್ ಕನ್ನಡ, ಬೆಂಗಳೂರು: ವಿವಿಧ ಉದ್ಯಮ ವಲಯಗಳಿಗೆ ಅನ್ವಯಿಸುವಂತೆ ಸರ್ಕಾರ ಇತ್ತೀಚೆಗೆ ಕನಿಷ್ಠ ವೇತನವನ್ನು ಗಣನೀಯ ಪ್ರಮಾಣದಲ್ಲಿ ಹೆಚ್ಚಿಸಿರುವ ನಿರ್ಧಾರ ಅವೈಜ್ಞಾನಿಕ ಹಾಗೂ ಅದರ ಪ್ರಾಯೋಗಿಕ ಅನುಷ್ಠಾನ ಕಷ್ಟಕರ ಎಂದು ಬೆಂಗಳೂರು ಹೋಟೆಲುಗಳ ಸಂಘವು ಆಕ್ಷೇಪ ವ್ಯಕ್ತಪಡಿಸಿದೆ.
ಇದೂ ಓದಿ: ಮತ್ತದೇ ಬೇಸರ.. ಮನಸು ಗಾಂಧಿಬಜಾರು.. ಮರಳೀತೇ ನಿತ್ಯೋತ್ಸವ?
ಅಲ್ಲದೆ ಈ ಹೊಸ ಕನಿಷ್ಠ ವೇತನ ಆದೇಶವನ್ನು ಹಿಂಪಡೆಯುಂತೆ ಕೋರಿ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಅವರಿಗೆ ಬೆಂಗಳೂರು ಹೋಟೆಲುಗಳ ಸಂಘದ ವತಿಯಿಂದ ಮನವಿ ಸಲ್ಲಿಸಲಾಗಿದೆ.
ಇದೂ ಓದಿ: ಕಾಫಿಗಿದೆ ಸಾವನ್ನೂ ಮುಂದೂಡುವ ಶಕ್ತಿ: ಕಾಫಿ ಹೇಗಿರಬೇಕು, ಎಷ್ಟು ಕುಡಿಯಬೇಕು?
ಏಕಾಏಕಿ ಶೇ.60 ಕನಿಷ್ಠ ವೇತನ ಹೆಚ್ಚಿಸಿರುವುದು ಎಲ್ಲ ಉದ್ಯಮ ವಲಯಗಳ ಮೇಲೆ ತೀವ್ರ ಆರ್ಥಿಕ ಹೊರೆ ಉಂಟಾಗಿಸುತ್ತದೆ ಎಂದು ಸಂಘದ ಗೌರವಾಧ್ಯಕ್ಷ ಪಿ.ಸಿ. ರಾವ್, ಅಧ್ಯಕ್ಷ ಎಚ್.ಎಸ್. ಸುಬ್ರಹ್ಮಣ್ಯ ಹೊಳ್ಳ ಹಾಗೂ ಗೌರವ ಕಾರ್ಯದರ್ಶಿ ವೀರೇಂದ್ರ ಕಾಮತ್ ಅವರು ಮನವಿಯಲ್ಲಿ ತಿಳಿಸಿದ್ದಾರೆ.
ಇದೂ ಓದಿ: ಉಚಿತ ಅನ್ನೋದೇ ಅನುಚಿತ; ಫ್ರೀಯಾಗಿದ್ರೆ ಓದಿ, ಇದೂ ಫ್ರೀನೇ…
ಕನಿಷ್ಠ ವೇತನ ಪರಿಷ್ಕರಣೆ ಮುನ್ನ ಉದ್ಯಮದ ಪ್ರತಿನಿಧಿಗಳ ಜೊತೆ ಯಾವುದೇ ಪೂರ್ವಭಾವಿ ಸಭೆ ಅಥವಾ ಸಮಾಲೋಚನೆ ನಡೆಸಿಲ್ಲ ಹಾಗೂ ಸಂಬಂಧಿತ ವಲಯಗಳ ಅಭಿಪ್ರಾಯಗಳನ್ನು ಪರಿಗಣಿಸದೆ ಈ ನಿರ್ಧಾರ ಕೈಗೊಂಡಿರುವುದು ಸಮಂಜಸವಲ್ಲ ಎಂದೂ ಅವರು ಅಸಮಾಧಾನ ವ್ಯಕ್ತಪಡಿಸಿದ್ದಾರೆ.
ಇದೂ ಓದಿ: ಪ್ರವಾಸೋದ್ಯಮ ಸೇವೆಗಳನ್ನು ಒಂದೇ ವೇದಿಕೆಯಡಿ ತರಲು ‘ಡಿಜಿಟಲ್ ಸ್ಟ್ಯಾಕ್’ ಯೋಜನೆ
ನಮ್ಮ ನೆರೆಯ ರಾಜ್ಯಗಳ ಕನಿಷ್ಠ ವೇತನಕ್ಕೆ ಹೋಲಿಸಿದರೆ, ಇಲ್ಲಿ ನಿಗದಿಪಡಿಸಿರುವ ಕನಿಷ್ಠ ವೇತನ ಬಹಳ ಹೆಚ್ಚಾಗಿದೆ. ಆದ್ದರಿಂದ, ಈಗಾಗಲೇ ಪ್ರಕಟಿಸಿರುವ ಹೊಸ ಕನಿಷ್ಠ ವೇತನ ಅಧಿಸೂಚನೆಯನ್ನು ತಕ್ಷಣ ಹಿಂಪಡೆಯಬೇಕೆಂದು ಬೆಂಗಳೂರು ಹೋಟೆಲುಗಳ ಸಂಘದ ಪದಾಧಿಕಾರಿಗಳು ಸರ್ಕಾರವನ್ನು ಒತ್ತಾಯಿಸಿದ್ದಾರೆ.
ಇದೂ ಓದಿ: ಹೋಟೆಲೋದ್ಯಮದ ಸಮಸ್ಯೆಗಳ ಕುರಿತು ಉಪ ಮುಖ್ಯಮಂತ್ರಿ ಅವರಿಗೆ ಬಿಬಿಎಚ್ಎ ಮನವಿ
ಇದೂ ಓದಿ: ಕರ್ಣಾಟಕ ಬ್ಯಾಂಕ್ ಜೊತೆ ಬಿಎಚ್ಎ ಮಾತುಕತೆ; ಹೋಟೆಲಿಗರ ಸಮಸ್ಯೆಯೊಂದು ತಗ್ಗುವ ಸಾಧ್ಯತೆ
ಇದೂ ಓದಿ: ದಿಗ್ಗಜ ಹೋಟೆಲಿಗರಿಗೂ ತಿಳಿಯಲಾಗಲಿಲ್ಲ ಇದೊಂದು ರಹಸ್ಯ!; ಕೆಲವು ಹೋಟೆಲ್ಗಳಲ್ಲಿದೆಯಾ ‘ಸ್ಥಳ ಮಹಿಮೆʼ?



