ಹೋಟೆಲ್ ಕನ್ನಡ, ಬೆಂಗಳೂರು: ರಾಜಧಾನಿ ಬೆಂಗಳೂರಿನಲ್ಲಿನ ʼರಾಮೇಶ್ವರಂ ಕೆಫೆʼಯಲ್ಲಿ ಮಂಗಳವಾರ ಕೆಲವು ಗ್ರಾಹಕರಿಗೆ ಒಂದು ವಿಶೇಷ ಅನುಭವವಾಯಿತು. ಅಂಥ ಅನುಭವಕ್ಕೆ ಕಾರಣರಾದವರು ಬೇರಾರೂ ಅಲ್ಲ, ಕೇಂದ್ರ ಸಚಿವ ಜ್ಯೋತಿರಾದಿತ್ಯ ಸಿಂಧಿಯಾ.
ಕಾರ್ಯಕ್ರಮವೊಂದರ ಸಲುವಾಗಿ ಬೆಂಗಳೂರಿಗೆ ಆಗಮಿಸಿದ ಸಚಿವ ಸಿಂಧಿಯಾ ಇದ್ದಕ್ಕಿದ್ದಂತೆ ರಾಮೇಶ್ವರಂ ಕೆಫೆಗೆ ಭೇಟಿ ನೀಡಿದ್ದಲ್ಲದೆ, ಸೀದಾ ಅಲ್ಲಿನ ಅಡುಗೆ ಮನೆಗೂ ಪ್ರವೇಶಿಸಿದ್ದರು. ಅಷ್ಕಕ್ಕೆ ಸುಮ್ಮನಾಗದ ಅವರು ಅಲ್ಲಿದ್ದ ಸಿಬ್ಬಂದಿಗೆ ಕೈಕುಲುಕಿ ನೇರ ದೋಸೆ ತಯಾರಿ ಸ್ಥಳಕ್ಕೆ ತೆರಳಿ, ಸ್ವತಃ ದೋಸೆ ಹುಯ್ದು ಗಮನ ಸೆಳೆದಿದ್ದಾರೆ.
ಇದೂ ಓದಿ: ಮತ್ತದೇ ಬೇಸರ.. ಮನಸು ಗಾಂಧಿಬಜಾರು.. ಮರಳೀತೇ ನಿತ್ಯೋತ್ಸವ?
ಬಳಿಕ ಕೌಂಟರ್‌ನಲ್ಲಿ ಗ್ರಾಹಕರಿಗೆ ಅವರೇ ದೋಸೆಯನ್ನು ನೀಡಿದ್ದಲ್ಲದೆ, ಅಲ್ಲಿ ಜನಸಾಮಾನ್ಯರ ನಡುವೆ ಕಾಫಿಯನ್ನೂ ಸವಿದಿದ್ದು, ಅದರ ವಿಡಿಯೋಗಳು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿವೆ.
ಇದೂ ಓದಿ: ಬಿಸಿ ದೋಸೆ ಹೆಂಚಲ್ಲೂ ಸುಶ್ರಾವ್ಯ ನಾದ ಹೊರಹೊಮ್ಮಿಸಿದ ಖ್ಯಾತ ಕಲಾವಿದ!
ಈ ಕುರಿತು ಸಾಮಾಜಿಕ ಜಾಲತಾಣದಲ್ಲಿ ತಮ್ಮ ಅನುಭವ ಹಂಚಿಕೊಂಡಿರುವ ಅವರು, ರಾಮೇಶ್ವರಂ ಕೆಫೆಗೆ ಭೇಟಿ ನೀಡುವುದನ್ನು ತಡೆಯಲು ಸಾಧ್ಯವಾಗಲಿಲ್ಲ. ಅಲ್ಲಿನ ಅಡುಗೆಮನೆಯೊಳಗೆ ಹೋಗಿ ಅವರು ತಯಾರಿಸುವ ರುಚಿಯ ಜಾದೂವನ್ನು ಹತ್ತಿರದಿಂದ ವೀಕ್ಷಿಸಿದೆ. ನುರಿತ ಶೆಫ್‌ಗಳ ಮೇಲ್ವಿಚಾರಣೆಯಲ್ಲಿ ದೋಸೆ ಹೊಯ್ಯಲು ಪ್ರಯತ್ನಿಸಿದೆ. ನಿಜಕ್ಕೂ ದೋಸೆ ಮಾಡುವುದು ನಾವು ಅಂದುಕೊಂಡಷ್ಟು ಸುಲಭದ ಕೆಲಸವಲ್ಲ ಎಂಬುದು ತಿಳಿಯಿತುʼ ಎಂದು ಬರೆದುಕೊಂಡಿದ್ದಾರೆ.
ಇದೂ ಓದಿ: ‘ತಾಜಾ ತಿಂಡಿ’ಯೂ, ಖ್ಯಾತ ಐರಿಷ್ ಕವಿಯೂ ಮತ್ತು ಪತ್ರಕರ್ತ ವಿಶ್ವೇಶ್ವರ ಭಟ್!
ಅಲ್ಲದೆ, ಬೆಂಗಳೂರಿಗೆ ಬಂದಾಗ ರಾಮೇಶ್ವರಂ ಕೆಫೆಗೆ ಭೇಟಿ ನೀಡದೇ ಇರಲು ಸಾಧ್ಯ ಇಲ್ಲ. ಇದು ಪ್ರತಿಯೊಬ್ಬರೂ ಖಂಡಿತ ಭೇಟಿ ನೀಡಲೇಬೇಕಾದ ಸ್ಥಳ ಎಂದು ಸಚಿವರು ಶ್ಲಾಘಿಸಿದ್ದಾರೆ.
ಇದೂ ಓದಿ: ವಿದ್ಯಾರ್ಥಿ ಭವನದ ಎದುರು ʼಇಡ್ಲಿ-ಸಾಂಬಾರ್, ದೋಸೆ-ಚಟ್ನಿʼಯಲ್ಲೇ ಯೋಗರಾಜ್ ಭಟ್ಟರ ಸಂಗೀತ ಪಾಕ!
ಇದೂ ಓದಿ: ವಿಶ್ವ ಕುಂದಾಪ್ರ ಕನ್ನಡ ಹಬ್ಬಕ್ಕೆ ಮತ್ತೆ ʼಅರಮನೆʼಯ ರಾಜ ವೈಭೋಗ; ಕಾರಣಕರ್ತರಿವರು..
ಇದೂ ಓದಿ: ʼಬರೀ ಬನ್ ಕೊಡಿ, ಕ್ರೀಮ್-ಜಾಮ್ ನಾವೇ ಹಾಕಿಕೊಳ್ಳುತ್ತೇವೆʼ: ವಿತ್ತ ಸಚಿವರಿಗೆ ಹೋಟೆಲ್ ಮಾಲೀಕರ ಅಹವಾಲು!



