ಹೋಟೆಲ್ ಕನ್ನಡ, ಬೆಂಗಳೂರು: ‘ದಿ ರಾಮೇಶ್ವರಂ ಕೆಫೆ’ಯ ಹೆಸರು ಮತ್ತು ಲೋಗೋವನ್ನು ಹೋಲುವ ನಾಮಫಲಕಗಳನ್ನು (ಸೈನೇಜ್) ಬಳಸದಂತೆ ನಗರ ನ್ಯಾಯಾಲಯವು ಹಲವು ರೆಸ್ಟೋರೆಂಟ್ಗಳು ಮತ್ತು ಮಳಿಗೆಗಳಿಗೆ ತಡೆಯಾಜ್ಞೆ ನೀಡಿದೆ.
ಮುಂಬೈ, ಉಡುಪಿ, ಕುಂದಾಪುರ ಮತ್ತು ತೆಲಂಗಾಣದ ರೆಸ್ಟೋರೆಂಟ್ಗಳಿಗೆ ‘ದಿ ರಾಮೇಶ್ವರಂ ಕೆಫೆ’ಯ ಹೆಸರು ಅಥವಾ ಲಾಂಛನವನ್ನು ಹೋಲುವ ಬೋರ್ಡ್ಗಳನ್ನು ಪ್ರದರ್ಶಿಸದಂತೆ ನ್ಯಾಯಾಲಯ ನಿರ್ಬಂಧ ವಿಧಿಸಿದೆ ಎಂಬುದಾಗಿ ದಿ ರಾಮೇಶ್ವರಂ ಕೆಫೆ ಆಡಳಿತ ಮಂಡಳಿ ತಿಳಿಸಿದೆ.
ಇದೂ ಓದಿ: ರಾಮೇಶ್ವರಂ ಕೆಫೆಯಲ್ಲಿ ದೋಸೆ ಹುಯ್ದು ಗಮನ ಸೆಳೆದ ಕೇಂದ್ರ ಸಚಿವ ಜ್ಯೋತಿರಾದಿತ್ಯ ಸಿಂಧಿಯಾ!
ಇದೇ ರೀತಿಯ ಬ್ರ್ಯಾಂಡಿಂಗ್ ಬಳಸುವುದರಿಂದ ಗ್ರಾಹಕರು ಇತರ ಮಳಿಗೆಗಳನ್ನು ತಮ್ಮ ಶಾಖೆಗಳೆಂದು ತಪ್ಪಾಗಿ ಭಾವಿಸುವ ಸಾಧ್ಯತೆ ಇದೆ ಎಂದು ದಿ ರಾಮೇಶ್ವರಂ ಕೆಫೆ ಆಡಳಿತ ಮಂಡಳಿ ಆತಂಕ ವ್ಯಕ್ತಪಡಿಸಿತ್ತು.
ಇದೂ ಓದಿ: ಹೋಟೆಲ್ ಕನ್ನಡ: ಇದು ಕನ್ನಡಿಗ, ಕರ್ನಾಟಕದ ಹೋಟೆಲಿಗರ ಸುದ್ದಿದರ್ಶಿನಿ
ಇವು ‘ದಿ ರಾಮೇಶ್ವರಂ ಕೆಫೆ’ಯ ಅಧಿಕೃತ ಶಾಖೆಗಳು ಅಥವಾ ಫ್ರ್ಯಾಂಚೈಸಿ ಮಳಿಗೆಗಳು ಎಂಬ ತಪ್ಪು ಅಭಿಪ್ರಾಯ ಮೂಡಬಹುದು ಎಂಬ ಹಿನ್ನೆಲೆಯಲ್ಲಿ ಸಂಸ್ಥೆಯು ನ್ಯಾಯಾಲಯದ ಮೊರೆ ಹೋಗಿತ್ತು ಎಂಬುದಾಗಿ ‘ದಿ ರಾಮೇಶ್ವರಂ ಕೆಫೆ’ ತಂಡವು ಸಾರ್ವಜನಿಕ ನೋಟಿಸ್ ಮೂಲಕ ಮಾಹಿತಿ ಹಂಚಿಕೊಂಡಿದೆ.

ಇದೂ ಓದಿ: ಹೊರಗಡೆ ಊಟ ಮಾಡುವುದನ್ನು ಕಡಿಮೆ ಮಾಡಿದ ಜನರು!; ಕೇರಳಂ ಹೋಟೆಲಿಗರ ಕಳವಳ
ಇದೂ ಓದಿ: ಜಾಗತಿಕ ವಿಸ್ತರಣೆಯತ್ತ A2B: ಅಡ್ಯಾರ್ ಆನಂದ ಭವನದಲ್ಲಿ ಬೋಧಿ ಟ್ರೀನ 1,695 ಕೋಟಿ ರೂ. ಹೂಡಿಕೆ
ಇದೂ ಓದಿ: ಕರ್ನಾಟಕದ ಹೋಟೆಲೋದ್ಯಮ ಭಾರತಕ್ಕೆ ಮಾದರಿ: ಮಾಜಿ ಪೊಲೀಸ್ ಆಯುಕ್ತ ಭಾಸ್ಕರ್ ರಾವ್



