ಹೋಟೆಲ್ ಕನ್ನಡ, ಬೆಂಗಳೂರು: ಗ್ರಾಹಕರ ಹಿತಾಸಕ್ತಿಯ ರಕ್ಷಣೆ ಹಾಗೂ ಬೆಳೆ ಸಂರಕ್ಷಣೆಯ ಅಗತ್ಯ ಗಮನದಲ್ಲಿ ಇರಿಸಿಕೊಂಡು ಚಹಾದಲ್ಲಿ ‘ಅಸಿಟಾಮಿಪ್ರಿಡ್’ (Acetamiprid) ಮತ್ತು ‘ಇಮಿಡಾಕ್ಲೋಪ್ರಿಡ್’ (Imidacloprid) ಎಂಬ ಎರಡು ಕೀಟನಾಶಕಗಳ ಗರಿಷ್ಠ ಉಳಿಕೆ ಮಿತಿ (Maximum Residue Limit- MRL) ನಿಗದಿಪಡಿಸಲು ಆಹಾರ ಸುರಕ್ಷೆ ಮತ್ತು ಗುಣಮಟ್ಟ ಪ್ರಾಧಿಕಾರ (FSSAI) ಪ್ರಸ್ತಾವನೆ ಸಲ್ಲಿಸಿದೆ.
ಈ ಎರಡು ಕೀಟನಾಶಕಗಳ ಮಿತಿಗೆ ಸಂಬಂಧಿಸಿದಂತೆ ಭಾರತೀಯ ಆಹಾರ ಸುರಕ್ಷತೆ ಮತ್ತು ಗುಣಮಟ್ಟ ಪ್ರಾಧಿಕಾರ ಕರಡು ತಿದ್ದುಪಡಿಗಳನ್ನು ಅಧಿಸೂಚಿಸಿದೆ ಎಂದು ಶನಿವಾರ ಬಿಡುಗಡೆ ಮಾಡಲಾದ ಅಧಿಕೃತ ಹೇಳಿಕೆಯಲ್ಲಿ ಆರೋಗ್ಯ ಸಚಿವಾಲಯ ತಿಳಿಸಿದೆ.
ವಿಜ್ಞಾನ ಆಧಾರಿತ ಆಹಾರ ಸುರಕ್ಷತಾ ನಿಯಂತ್ರಣ ಮತ್ತು ಗ್ರಾಹಕರ ರಕ್ಷಣೆಯನ್ನು ಉತ್ತೇಜಿಸುವ ಎಫ್ಎಸ್ಎಸ್ಎಐನ ನಿರಂತರ ಪ್ರಯತ್ನಗಳ ಭಾಗವಾಗಿ ಈ ಕರಡು ಸಿದ್ಧಪಡಿಸಲಾಗಿದೆ.
ಇದೂ ಓದಿ: ಕಬಾಬ್-ಮಂಚೂರಿಯನ್ ಬಳಿಕ ಚಹಾ ಪುಡಿಯದ್ದೂ ಬಣ್ಣ ಬಯಲು
ಚಹಾದಲ್ಲಿ ಅಸಿಟಾಮಿಪ್ರಿಡ್ಗೆ ಕೆ.ಜಿ.ಗೆ 20 ಮಿಲಿಗ್ರಾಂ (20 ppm) ಮತ್ತು ಇಮಿಡಾಕ್ಲೋಪ್ರಿಡ್ಗೆ ಕೆ.ಜಿ.ಗೆ 50 ಮಿಲಿಗ್ರಾಂ (50 ppm) ಗರಿಷ್ಠ ಮಿತಿಯನ್ನು ಆಹಾರ ಸುರಕ್ಷತೆ ಮತ್ತು ಗುಣಮಟ್ಟ (ಮಾಲಿನ್ಯಕಾರಕಗಳು, ಜೀವಾಣುಗಳು ಮತ್ತು ಶೇಷಗಳು) ತಿದ್ದುಪಡಿ ನಿಯಮಾವಳಿಗಳು, 2026ರ ಕರಡು ಪ್ರಸ್ತಾಪಿಸಿದೆ.
ಇದೂ ಓದಿ: ಜಗತ್ತಿನಲ್ಲೇ ಅತ್ಯಧಿಕ ಚಹಾ ಸೇವನೆ ಇರುವ ದೇಶ ಭಾರತ!
ಪ್ರಸ್ತಾವಿತ ಮಿತಿಗಳು ಚಹಾದಲ್ಲಿ ಉಳಿದಿರಬಹುದಾದ ಕೀಟನಾಶಕಗಳ ಬಗ್ಗೆ ಸ್ಪಷ್ಟವಾಗಿ ವ್ಯಾಖ್ಯಾನಿಸಲಾದ ನಿಯಂತ್ರಣ ಮಾನದಂಡಗಳನ್ನು ಒದಗಿಸುವ ಉದ್ದೇಶ ಹೊಂದಿವೆ. ಇದು ಆಹಾರ ಸುರಕ್ಷತೆಯ ಅಗತ್ಯಗಳ ಅನುಸರಣೆ, ಮೇಲ್ವಿಚಾರಣೆ ಮತ್ತು ಜಾರಿಗೆ ಅನುಕೂಲ ಮಾಡಿಕೊಡುತ್ತದೆ ಎಂದು ಸಚಿವಾಲಯ ಹೇಳಿದೆ.
ಚಹಾ ವಲಯಕ್ಕೆ ಸಂಬಂಧಿಸಿದಂತೆ, ಬೆಳೆಗಾರರು, ಸಂಸ್ಕರಿಸುವವರು, ಆಹಾರ ಉದ್ಯಮಗಳು, ತಪಾಸಣಾ ಪ್ರಯೋಗಾಲಯಗಳು ಮತ್ತು ಜಾರಿ ಅಧಿಕಾರಿಗಳಿಗೆ ಹೆಚ್ಚಿನ ನಿಯಂತ್ರಣ ಸ್ಪಷ್ಟತೆಯನ್ನು ಒದಗಿಸುವ ಗುರಿಯನ್ನು ಕೂಡ ಇದು ಹೊಂದಿದೆ.
ಇದೂ ಓದಿ: ಮಸಾಲಾ ಟೀಯಿಂದ ಕಡುಕಪ್ಪು ಚಹಾದವರೆಗೆ; ಜೀವನವಿಧಾನ..
ಕೀಟನಾಶಕ ಉಳಿಕೆ ದತ್ತಾಂಶ, ಆಹಾರಕ್ರಮದ ಒಡ್ಡುವಿಕೆ (dietary exposure) ಮತ್ತು ಸಂಬಂಧಿತ ಸುರಕ್ಷತಾ ಅಂಶಗಳನ್ನು ಗಣನೆಗೆ ತೆಗೆದುಕೊಂಡು ವೈಜ್ಞಾನಿಕ ಮೌಲ್ಯಮಾಪನಗಳ ಆಧಾರದ ಮೇಲೆ ಈ ಮಿತಿಗಳನ್ನು ಸ್ಥಾಪಿಸಲಾಗಿದೆ.
ಭಾರತದಲ್ಲಿ ಪ್ರಸ್ತಾಪಿಸಲಾದ ಅಸಿಟಾಮಿಪ್ರಿಡ್ ಮಿತಿಯು (20 ppm) ಜಪಾನ್ (30 ppm) ಮತ್ತು ಅಮೆರಿಕ (50 ppm) ದೇಶಗಳ ಮಿತಿಗಿಂತ ಕಡಿಮೆಯಾಗಿದೆ ಎಂದು ಸಚಿವಾಲಯ ಒತ್ತಿಹೇಳಿದೆ. ಇನ್ನು ಇಮಿಡಾಕ್ಲೋಪ್ರಿಡ್ ಮಿತಿಯನ್ನು ಅಂತಾರಾಷ್ಟ್ರೀಯ ಕೋಡೆಕ್ಸ್ (Codex) ಮಾನದಂಡಗಳ ಆಧಾರದ ಮೇಲೆ ರೂಪಿಸಲಾಗಿದೆ.
ಇದೂ ಓದಿ: ಚಹಾ ಮಾರಿದ್ದೆ, ತಟ್ಟೆ-ಲೋಟ ಕೂಡ ತೊಳೆದಿದ್ದೆ; ಆ ದಿನಗಳನ್ನು ನೆನಪಿಸಿಕೊಂಡ ಪ್ರಧಾನಿ..
ಲಭ್ಯವಿರುವ ವೈಜ್ಞಾನಿಕ ದತ್ತಾಂಶ ಮತ್ತು ಜಾಗತಿಕ ಅಭ್ಯಾಸಗಳ ಆಧಾರದ ಮೇಲೆ ಕೀಟನಾಶಕ ಉಳಿಕೆ ಮಾನದಂಡಗಳನ್ನು ಪರಿಶೀಲಿಸುವ ಮತ್ತು ಪರಿಷ್ಕರಿಸುವ ಎಫ್ಎಸ್ಎಸ್ಎಐನ ನಿಯಂತ್ರಣ ವಿಧಾನದ ಭಾಗವಾಗಿ ಈ ಹೊಸ ಪ್ರಸ್ತಾವನೆ ಹೊರಬಂದಿದೆ. ಹೆಚ್ಚಿನ ವಿಷತ್ವ ಹೊಂದಿರುವ 13 ಕೀಟನಾಶಕಗಳನ್ನು ಪಟ್ಟಿಯಿಂದ ಕೈಬಿಡುವ ಹಿಂದಿನ ನಿಯಂತ್ರಣ ಕ್ರಮಗಳನ್ನು ಸಹ ಇದು ಒಳಗೊಂಡಿದೆ.
ಇದೂ ಓದಿ: ನ್ಯಾಯಕ್ಕಾಗಿ ಚಹಾ ಮೊರೆ ಹೋದ ವಿವಾಹಿತ; ಕೈಯಲ್ಲಿ ಬೇಡಿ, ಪತ್ನಿ ಮನೆ ಬಳಿಯೇ ಟೀ ಸ್ಟಾಲ್!
ಸೂಕ್ತ ರೀತಿಯಲ್ಲಿ ಮತ್ತು ನಿಗದಿತ ಅಭ್ಯಾಸಗಳ ಪ್ರಕಾರ ಕೀಟನಾಶಕಗಳನ್ನು ಬಳಸಿದಾಗ, ರೈತರು ಕೀಟಗಳಿಂದ ಬೆಳೆಗಳನ್ನು ರಕ್ಷಿಸಲು, ಬೆಳೆ ನಷ್ಟವನ್ನು ಕಡಿಮೆ ಮಾಡಲು ಮತ್ತು ಕೃಷಿ ಉತ್ಪಾದಕತೆಯನ್ನು ಕಾಪಾಡಿಕೊಳ್ಳಲು ಸಹಾಯ ಆಗುತ್ತದೆ.
ಜಾಗತಿಕವಾಗಿ ಪ್ರತಿ ಹೆಕ್ಟೇರ್ಗೆ ಸರಾಸರಿ 2.38 ಕೆ.ಜಿ. ಕೀಟನಾಶಕ ಬಳಕೆ ಆಗುತ್ತಿದ್ದರೆ, ಭಾರತದಲ್ಲಿ ಇದರ ಪ್ರಮಾಣ ಬಹಳ ಕಡಿಮೆ ಇದ್ದು ಪ್ರತಿ ಹೆಕ್ಟೇರ್ಗೆ 0.5 ಕೆ.ಜಿ.ಗಿಂತಲೂ ಕಡಿಮೆ ಇದೆ.
ಇದೂ ಓದಿ: ಭಾರತದಿಂದ ಒಂದು ವರ್ಷದಲ್ಲಿ ವಿದೇಶಗಳಿಗೆ ರಫ್ತಾದ ಚಹಾ ಪ್ರಮಾಣ ಎಷ್ಟು ಗೊತ್ತೇ?; ಇಲ್ಲಿದೆ ವಿವರ…
ಇದೂ ಓದಿ: ಕಾಫಿಗಿದೆ ಸಾವನ್ನೂ ಮುಂದೂಡುವ ಶಕ್ತಿ: ಕಾಫಿ ಹೇಗಿರಬೇಕು, ಎಷ್ಟು ಕುಡಿಯಬೇಕು?
ಇದೂ ಓದಿ: ಒಂದು ಕಪ್ ಟೀ ಬೆಲೆ 340 ರೂಪಾಯಿ; ಚಹಾ ದರದ ಅನುಸಾರ ಹಣದುಬ್ಬರ ಅಳೆದ ಮಾಜಿ ಸಚಿವ!



