ಒಳಗೇನಿದೆ!?

ಮೈಸೂರು ದಸರೆಗೆ ʼಹುಲಿʼ ಬಂದಿದೆ!; ಜಾಗ ಬಿಡಿ ಜಾಗರೀ.. ಇದು ʼಜಾಗರಿ ರಮ್‌…ʼ

ಬೆಂಗಳೂರು: ʼಮೈಸೂರು ದಸರೆಗೆ ʼಹುಲಿʼ ಬಂದಿದೆ!ʼ

-ಮೈಸೂರು ದಸರಾದಲ್ಲೇ ಹೀಗೊಂದು ಮಾತು ಕೇಳಿ ಬಂದರೆ ದಸರೆಗೆ ಬಂದ ಜನ ಹೌಹಾರುವುದಂತೂ ಖಚಿತ. ʼಜಾಗ ಬಿಡಿ, ಜಾಗರೀ..ʼ ಎಂದು ಜನರು ಬೆಚ್ಚಿ ಓಡಿದರೂ ಅಚ್ಚರಿ ಇಲ್ಲ. ಹಾಗಂತ ಈ ʼಹುಲಿʼಗೆ ಯಾರೂ ಬೆಚ್ಚಿ ಬಿದ್ದಿಲ್ಲ. ಏಕೆಂದರೆ ಇದು ಬಿರಡೆ ಬಿಚ್ಚಿ ಏರಿಸುವ ʼಹುಲಿʼಯೇ ಹೊರತು ಬೆಚ್ಚಿ ಬೀಳಿಸುವ ಹುಲಿಯಲ್ಲ.

ಹೌದು.. ಇದು ನೈಜ ಹುಲಿಯಲ್ಲ. ʼಹುಲಿʼ ಎಂಬ ಹೆಸರಿನ ಜಾಗರಿ ರಮ್‌. ಬೆಲ್ಲದಿಂದ ಕರ್ನಾಟಕದಲ್ಲೇ ತಯಾರಿಸಲಾಗಿರುವ ಈ ರಮ್‌ ಮೈಸೂರು ದಸರೆ ಸಂದರ್ಭದಲ್ಲಿ ಮಾರುಕಟ್ಟೆಗೆ ಬಿಡುಗಡೆ ಆಗಿದೆ. ಅದೇ ಕಾರಣಕ್ಕೆ ಈ ಜಾಗರಿ ರಮ್‌ನ ಉತ್ಪಾದಕರಾದ ಅರುಣ ಅರಸ್‌ ಅವರು ʼಮೈಸೂರು ದಸರೆಗೆ ಹುಲಿ ಬಂದಿದೆ!ʼ ಎಂದು ಹೇಳುವ ಮೂಲಕ ತಮ್ಮ ಉತ್ಪನ್ನದ ಬಿಡುಗಡೆಯ ಸಂತಸವನ್ನು ಹಂಚಿಕೊಂಡಿದ್ದಾರೆ.

ಮೈಸೂರಿನಲ್ಲೇ ಸ್ಥಾಪಿಸಲಾಗಿರುವ ʼಹುಲಿ ಸ್ಪಿರಿಟ್ಸ್‌ ಪ್ರೈವೇಟ್‌ ಲಿಮಿಟೆಡ್‌ʼ ಕಂಪನಿ ಮೂಲಕ ಈ ʼಹುಲಿʼ ಜಾಗರಿ ರಮ್‌ ಉತ್ಪಾದಿಸಲಾಗಿದೆ. ಹೀಗಾಗಿ ಇದು ಒಂದು ರೀತಿಯಲ್ಲಿ ʼಮೈಸೂರಿನ ಹುಲಿʼ ಎಂದೂ ಕರೆಯಬಹುದಾದ ರಮ್‌ ಆಗಿದೆ. ಹುಲಿ ರಮ್‌ನ ಮೊದಲ ಬ್ಯಾಚ್‌ನ ಎರಡು ಸಾವಿರ ಬಾಟಲಿಗಳನ್ನು ಮೈಸೂರು ಹಾಗೂ ಬೆಂಗಳೂರಿನ ಮಾರುಕಟ್ಟೆಯಲ್ಲಿ ಬಿಡುಗಡೆ ಮಾಡಲಾಗುವುದು ಎಂದು ಅರುಣ ಅರಸ್‌ ಹೇಳಿಕೊಂಡಿದ್ದರು. 750 ಎಂ.ಎಲ್.‌ ಬಾಟಲಿಯಲ್ಲಿ ಲಭ್ಯ ಇರುವ ಈ ಹುಲಿ ಜಾಗರಿ ರಮ್‌ ಬೆಲೆ 2,800 ರೂಪಾಯಿ ಎನ್ನಲಾಗಿದೆ.

ಇದೂ ಓದಿ: ತಾಜ್‌ ಹೋಟೆಲ್‌ ಉದ್ಯೋಗಿಗಳಿಗೆ ಸಾವಿನ ಬಳಿಕವೂ ಜೀವನಪರ್ಯಂತದ ಸಂಬಳ ನೀಡಿದ್ದ ರತನ್‌ ಟಾಟಾ!

ಇದೂ ಓದಿ:ಹೋಟೆಲಿಗರೇ ಹುಷಾರು: ದಸರಾ-ದೀಪಾವಳಿ ಹಿನ್ನೆಲೆಯಲ್ಲಿ ಎಫ್‌ಎಸ್‌ಎಸ್‌ಎಐ ಹೊರಡಿಸಿದೆ ಹೊಸ ಆದೇಶ

ಇದೂ ಓದಿ: ಬೆಂಗಳೂರು ಹೋಟೆಲುಗಳ ಸಂಘದ ಸದಸ್ಯತ್ವ ಪಡೆಯುವುದು ಹೇಗೆ? ಅದಕ್ಕೆಂದೇ ಮಾಡಲಾಗಿದೆ ಹೊಸ ಸಮಿತಿ

ಸೋಷಿಯಲ್‌ ಮೀಡಿಯಾದಲ್ಲಿ ಹಂಚಿಕೊಳ್ಳಿ