ಒಳಗೇನಿದೆ!?

ಮೊದಲ ಭೇಟಿಯಲ್ಲೇ ʼತಾಜಾ ತಿಂಡಿʼಗೆ ಮರುಳಾದ ಗ್ರಾಹಕಿ!: ಇದು ʼಹುಚ್ಚುʼ ಅಂದಿದ್ದೇಕೆ?

ಬೆಂಗಳೂರು: ಈಗಿನ ದುಬಾರಿ ದುನಿಯಾದಲ್ಲಿ ಯಾವ ಹೋಟೆಲ್‌ನವರೂ ಕಡಿಮೆ ದರದಲ್ಲಿ ಊಟ-ತಿಂಡಿ ಕೊಡುವುದು ಸಾಧ್ಯವೇ ಇಲ್ಲ ಎಂಬ ಪರಿಸ್ಥಿತಿ ಇದೆ. ಇಂಥ ಸಂದರ್ಭದಲ್ಲಿ ʼತಾಜಾ ತಿಂಡಿʼಗೆ ತೆರಳಿದ ಗ್ರಾಹಕಿಯೊಬ್ಬರು ಅಲ್ಲಿನ ದರಕ್ಕೆ ಮರುಳಾಗಿ ಹೋಗಿದ್ದಾರೆ.

ಬೆಂಗಳೂರಿನ ಜಯನಗರದ 4ನೇ ಬ್ಲಾಕ್‌ನಲ್ಲಿರುವ ‘ತಾಜಾ ತಿಂಡಿ’ ಹೋಟೆಲ್‌ಗೆ ಹೀಗೆ ಮಾರುಹೋದವರ ಹೆಸರು ಪೂರ್ಣಿಮಾ ಪ್ರಭು. ಜುಲೈ 6ರ ಸಂಜೆ ʼತಾಜಾ ತಿಂಡಿʼ ಹೋಟೆಲ್‌ಗೆ ತೆರಳಿದ್ದ ಅವರು, ಇದೇ ತಮ್ಮ ಮೊದಲ ಭೇಟಿ ಎಂಬುದಾಗಿ ಹೇಳಿಕೊಂಡಿದ್ದಾರೆ. ಅಷ್ಟೇ ಆಗಿದ್ದರೆ ಅದರಲ್ಲಿ ವಿಶೇಷವೇನೂ ಇಲ್ಲ. ಆದರೆ ಅವರು ಅಲ್ಲಿನ ತಿಂಡಿಗಳ ದರದ ಬಗ್ಗೆ ಅಚ್ಚರಿ ವ್ಯಕ್ತಪಡಿಸಿದ್ದಾರೆ.

ಕಾರಾಬಾತ್‌, ಪ್ಲೇನ್‌ ದೋಸೆ, ವಡೆ ಹಾಗೂ ಕಾಫಿ ಖರೀದಿಸಿರುವ ಅವರು ಅಷ್ಟಕ್ಕೂ ಸೇರಿ ಒಟ್ಟು ಬರೀ 80 ರೂಪಾಯಿ ಬಿಲ್‌ ಆಗಿರುವುದಕ್ಕೆ ಅಪಾರ ಅಚ್ಚರಿ ವ್ಯಕ್ತಪಡಿಸಿದ್ದಾರೆ. ʼಹೇಗೆ? ಅವರು ಈ ದರದಲ್ಲಿ ಅದು ಹೇಗೆ ನಿಭಾಯಿಸುತ್ತಾರೆ? ಹುಚ್ಚು ಅಲ್ವಾ?ʼ ಎಂಬುದಾಗಿ ವಿಭಿನ್ನವಾಗಿ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.

ದರ ಮಾತ್ರವಲ್ಲದೆ, ಅಲ್ಲಿನ ಸ್ವಚ್ಛತೆ ಬಗ್ಗೆಯೂ ಪ್ರಶಂಸೆ ವ್ಯಕ್ತಪಡಿಸಿದ್ದಾರೆ. ಜೊತೆಗೆ ಗದ್ದಲವೂ ಕಡಿಮೆ ಎಂದಿದ್ದಾರೆ. ತಾವು ಹೋಟೆಲ್‌ಗೆ ಭೇಟಿ ನೀಡಿ ಸವಿದ ತಿಂಡಿ-ತಿನಿಸಿನ ಬಿಲ್‌ ಕೂಡ ಅವರು ತಮ್ಮ ಎಕ್ಸ್‌ ಖಾತೆಯಲ್ಲಿ ಹಂಚಿಕೊಂಡಿದ್ದಾರೆ. ಅಂದಹಾಗೆ ʼತಾಜಾ ತಿಂಡಿʼಯ ರುಚಿ ಮಾತ್ರವಲ್ಲದೆ ಸೂಕ್ತ ಬೆಲೆಗೆ ಈ ಹಿಂದೆಯೂ ಹಲವರು ಮೆಚ್ಚುಗೆ ವ್ಯಕ್ತಪಡಿಸಿದ್ದು ಗಮನ ಸೆಳೆದಿತ್ತು.

ಇದೂ ಓದಿ: ದರದ ಕಾರಣಕ್ಕೇ ಆದರಕ್ಕೆ ಪಾತ್ರವಾಗುತ್ತಿರುವ ʼತಾಜಾ ತಿಂಡಿʼ; ಆ ರೇಟು, ಏನದರ ಸೀಕ್ರೇಟು?

ಇದೂ ಓದಿ: ‘ತಾಜಾ ತಿಂಡಿ’ಯೂ‌, ಖ್ಯಾತ ಐರಿಷ್‌ ಕವಿಯೂ ಮತ್ತು ಪತ್ರಕರ್ತ ವಿಶ್ವೇಶ್ವರ ಭಟ್‌!

ಇದೂ ಓದಿ: ದಿಗ್ಗಜ ಹೋಟೆಲಿಗರಿಗೂ ತಿಳಿಯಲಾಗಲಿಲ್ಲ ಇದೊಂದು ರಹಸ್ಯ!; ಕೆಲವು ಹೋಟೆಲ್‌ಗಳಲ್ಲಿದೆಯಾ ‘ಸ್ಥಳ ಮಹಿಮೆʼ?

ಸೋಷಿಯಲ್‌ ಮೀಡಿಯಾದಲ್ಲಿ ಹಂಚಿಕೊಳ್ಳಿ