ಒಳಗೇನಿದೆ!?

‘ಹಳ್ಳಿಮನೆ’ ಸಮೂಹದ ಹೊಸ ‘ದೋಸೆ ಕ್ಯಾಂಪ್‌’ನಲ್ಲಿ ಇನ್ನು 3 ದಿನ ತಿಂಡಿಗಳಿಗೆ 50% ರಿಯಾಯಿತಿ!

ಬೆಂಗಳೂರು: ರಾಜಧಾನಿ ಬೆಂಗಳೂರಿನ ಹೆಸರಾಂತ ಹೋಟೆಲ್‌ ʼಹಳ್ಳಿಮನೆʼ ಸಮೂಹದ ಮತ್ತೊಂದು ʼದೋಸೆ ಕ್ಯಾಂಪ್‌ʼ ಬಿಟಿಎಂ ಬಡಾವಣೆಯಲ್ಲಿ ಶನಿವಾರ ಉದ್ಘಾಟನೆಯಾಗಿದ್ದು, ಭಾನುವಾರದಿಂದಲೇ ಸಾರ್ವಜನಿಕರಿಗೆ ತೆರೆದುಕೊಂಡಿದೆ.

ಈ ದೋಸೆ ಕ್ಯಾಂಪ್‌ನಲ್ಲಿ ಉದ್ಘಾಟನಾ ಸಮಾರಂಭದ ಕೊಡುಗೆಯಾಗಿ ಇನ್ನು ಮೂರು ದಿನಗಳ ಕಾಲ ಎಲ್ಲ ತಿಂಡಿ-ತಿನಿಸುಗಳಿಗೆ ಶೇ.50 ರಿಯಾಯಿತಿ (ಷರತ್ತುಗಳು ಅನ್ವಯ) ನೀಡಲಾಗುತ್ತದೆ. ಅಂದರೆ ಅಕ್ಟೋಬರ್‌ 13, 14 ಮತ್ತು 15ರಂದು ಇಲ್ಲಿ ಎಲ್ಲ ತಿಂಡಿಗಳು ನಿಗದಿತ ದರಕ್ಕಿಂತ ಅರ್ಧ ಬೆಲೆಯಲ್ಲಿ ಸಿಗಲಿವೆ.

ಇದೂ ಓದಿ: ಇನ್ಮುಂದೆ ಬೆರಳಿಟ್ಟರೂ, ಮುಖ ತೋರಿಸಿದರೂ ಹಣ ಟ್ರಾನ್ಸ್‌ಫರ್: ಏನಿದು ಹೊಸ ಫೀಚರ್?‌

ನೀಲಾವರ ಸಂಜೀವ ರಾವ್‌ ಅವರ ಮಾಲೀಕತ್ವದ ʼಹಳ್ಳಿಮನೆʼ ಸಮೂಹವು ಜಯನಗರದಲ್ಲಿಈಗಾಗಲೇ ಹಲವು ದಶಕಗಳಿಂದ ʼದೋಸೆ ಕ್ಯಾಂಪ್‌ʼ ಹೊಂದಿದ್ದು, ಈ ನೂತನ ಹೋಟೆಲ್ ಅವರ ಮೂರನೇ ಔಟ್‌ಲೆಟ್‌ ಆಗಿದೆ. ವಿಶೇಷವೆಂದರೆ ಈ ದೋಸೆ ಕ್ಯಾಂಪ್‌ ರಾತ್ರಿ 1 ಗಂಟೆಯವರೆಗೂ ತೆರೆದಿರುತ್ತದೆ.

ಇದೂ ಓದಿ: ʼಹಳ್ಳಿಮನೆʼ ಸಂಜೀವ ರಾವ್‌ ಅವರಿಗೆ ʼಬಿಎಚ್‌ಎ ಜೀವಮಾನದ ಸಾಧನೆ ಪ್ರಶಸ್ತಿʼ

ಮಲ್ಲೇಶ್ವರದಲ್ಲಿನ ‌ʼಹಳ್ಳಿಮನೆʼ ಹಲವು ವರ್ಷಗಳಿಂದ ಜನಪ್ರಿಯವಾಗಿದ್ದು, ದಕ್ಷಿಣ ಭಾರತೀಯ ತಿನಿಸುಗಳಷ್ಟೇ ಅಲ್ಲದೇ ಹಬ್ಬದೂಟಕ್ಕೂ ಪ್ರಸಿದ್ಧಿ ಪಡೆದಿದೆ. ಹಬ್ಬದ ಸಂದರ್ಭಗಳಲ್ಲಿನ ವಿಶೇಷ ಭೋಜನಕ್ಕೆ ಇಲ್ಲಿ ಜನರು ಭಾರಿ ಸಂಖ್ಯೆಯಲ್ಲಿ ಆಗಮಿಸುತ್ತಾರೆ.

ನೂತನ ಹೋಟೆಲ್‌ ವಿಳಾಸ: ದೋಸೆ ಕ್ಯಾಂಪ್‌, ನಂ. 14, ಬಿಡಿಎ, 80 ಅಡಿ ರಸ್ತೆ, ಐದನೇ ಅಡ್ಡರಸ್ತೆ, ಅವನಿ ಶೃಂಗೇರಿನಗರ, ಬಿಟಿಎಂ ಆರನೇ ಹಂತ, ಬೆಂಗಳೂರು-560076

ಇದೂ ಓದಿ: ಹೋಟೆಲ್ ಉದ್ಯಮದಾರರ ಸಹಕಾರ ಬ್ಯಾಂಕ್‌ ನಿರ್ದೇಶಕರಾಗಿ 27 ವರ್ಷಗಳ ಕಾಲ ಸೇವೆ ಸಲ್ಲಿಸಿದ ಬಿ.ಎಸ್‌. ಮಂಜುನಾಥ್‌

ಇದೂ ಓದಿ: ಕಾಫಿಗಿದೆ ಸಾವನ್ನೂ ಮುಂದೂಡುವ ಶಕ್ತಿ: ಕಾಫಿ ಹೇಗಿರಬೇಕು, ಎಷ್ಟು ಕುಡಿಯಬೇಕು?

ಇದೂ ಓದಿ: ದಿಗ್ಗಜ ಹೋಟೆಲಿಗರಿಗೂ ತಿಳಿಯಲಾಗಲಿಲ್ಲ ಇದೊಂದು ರಹಸ್ಯ!; ಕೆಲವು ಹೋಟೆಲ್‌ಗಳಲ್ಲಿದೆಯಾ ‘ಸ್ಥಳ ಮಹಿಮೆʼ?

ಸೋಷಿಯಲ್‌ ಮೀಡಿಯಾದಲ್ಲಿ ಹಂಚಿಕೊಳ್ಳಿ