ದಾವೋಸ್: ಸ್ವಿಜರ್ಲೆಂಡ್ನ ದಾವೋಸ್ನಲ್ಲಿ ಐದು ದಿನಗಳ ಕಾಲ ನಡೆದ ವಿಶ್ವ ಆರ್ಥಿಕ ವೇದಿಕೆಯ (ಡಬ್ಲ್ಯುಇಎಫ್) ವಾರ್ಷಿಕ ಸಭೆಯಲ್ಲಿ ಭಾರತದ ಆರ್ಥಿಕತೆಯ ಚರ್ಚೆಯ ಜೊತೆಗೆ, ಭಾರತೀಯ ಖಾದ್ಯಗಳ ಘಮ ಕೂಡ ಜೋರಾಗಿತ್ತು. ಹಿಮದಿಂದ ಆವೃತವಾದ ದಾವೋಸ್ನ ರಸ್ತೆಗಳಲ್ಲಿ ಸಂಚರಿಸಿದ ವಿಶ್ವ ನಾಯಕರು ಮತ್ತು ಗಣ್ಯರು ಮಸಾಲಾ ಚಾಯ್, ಸಮೋಸಾ, ಪಕೋಡ, ಪರೋಟ ಮತ್ತು ಕಿಚಡಿಯ ರುಚಿ ಸವಿದರು.
ವಿವಿಧ ಬಗೆಯ ಬಿರಿಯಾನಿ ಮತ್ತು ಭಾರತೀಯ ಶೈಲಿಯ ಪಲ್ಯಗಳು ಎಲ್ಲರ ಗಮನ ಸೆಳೆದವು. ಕೇವಲ ಭಾರತೀಯರಷ್ಟೇ ಅಲ್ಲದೆ, ವಿದೇಶಿಯರು ಕೂಡ ಭಾರತೀಯ ರುಚಿಗೆ ಫಿದಾ ಆಗಿರುವುದು ಕಂಡುಬಂತು.
ಇದೂ ಓದಿ: ಬೆಂಗಳೂರು ಹೋಟೆಲುಗಳ ಸಂಘದ ಸದಸ್ಯತ್ವ ಪಡೆಯುವುದು ಹೇಗೆ? ಅದಕ್ಕೆಂದೇ ಮಾಡಲಾಗಿದೆ ಹೊಸ ಸಮಿತಿ
ಡಬ್ಲ್ಯುಇಎಫ್ ವಾರ್ಷಿಕ ಸಭೆಯ ಸ್ಥಳವಾದ ಕಾಂಗ್ರೆಸ್ ಸೆಂಟರ್ಗೆ ಹೋಗುವ ಮುಖ್ಯ ರಸ್ತೆಯಲ್ಲಿರುವ ತಮ್ಮ ಲಾಂಜ್ ಬಳಿ ‘ಚಾಯ್ ಸೆಂಟ್ರಲ್ʼ ಸ್ಟಾಲ್ ಟಾಟಾ ಗ್ರೂಪ್ ಸ್ಥಾಪಿಸಿತ್ತು. ಎಚ್ಸಿಎಲ್ ಟೆಕ್ ಕೂಡ ಟೀ-ಕಾಫಿ ಸ್ಟಾಲ್ ತೆರೆದು ಗಮನ ಸೆಳೆಯಿತು.
ಮುಖ್ಯ ವಾಯುವಿಹಾರ ಪಥದ ಮತ್ತೊಂದು ಬದಿಯಲ್ಲಿ ‘ಅಕ್ಷಯ ಪಾತ್ರʼ ಸಂಸ್ಥೆಯು ಉಚಿತವಾಗಿ ಬಿಸಿ ಕಿಚಡಿ ವಿತರಿಸಿತು. ಚಳಿಯ ವಾತಾವರಣದಲ್ಲಿ ಬಿಸಿ ಕಿಚಡಿ ಸವಿಯಲು ಜನಸ್ತೋಮ ಉಂಟಾಗಿತ್ತು.
ಇದೂ ಓದಿ: ಅಮೆರಿಕದ ಪಿಟ್ಸ್ಬರ್ಗ್ನಲ್ಲಿ ಕುಂದಾಪುರದವರ ʼಉಡುಪಿ ಕೆಫೆʼ; ದ ಬೆಸ್ಟ್ ಹೋಟೆಲ್ ಎಂಬ ಮೆಚ್ಚುಗೆ
‘ಕುಮಾರ್ ಇಂಡಿಯನ್ ಫುಡ್ʼ ಎಂಬ ಭಾರತೀಯ ಫುಡ್ ಟ್ರಕ್ ಕೂಡ ಇಲ್ಲಿ ಕಾಣಿಸಿಕೊಂಡಿತು. ಸಮೋಸಾ, ಪಕೋಡ, ಅನ್ನ, ರೋಟಿ ಹಾಗೂ ಸಸ್ಯಾಹಾರಿ ಮತ್ತು ಮಾಂಸಾಹಾರಿ ಆಹಾರಗಳನ್ನು ಇಲ್ಲಿ ಮಾರಾಟ ಮಾಡಲಾಯಿತು. ವಿಶೇಷವೆಂದರೆ, ಅದೇ ಪ್ರದೇಶದಲ್ಲಿದ್ದ ಚೈನೀಸ್, ಸ್ವಿಸ್ ಮತ್ತು ಇತರ ಫುಡ್ ಟ್ರಕ್ಗಳಿಗಿಂತ ಈ ಭಾರತೀಯ ಟ್ರಕ್ ಬಳಿಯೇ ಅತಿ ಹೆಚ್ಚು ಗ್ರಾಹಕರು ನೆರೆದಿದ್ದರು.
ಕೇಂದ್ರ ಸಚಿವಾಲಯಗಳು ಮತ್ತು ಹತ್ತು ಭಾರತೀಯ ರಾಜ್ಯಗಳನ್ನು ಒಳಗೊಂಡಿದ್ದ ‘ಇಂಡಿಯಾ ಪೆವಿಲಿಯನ್ʼ ಒಳಗೆ ಕೂಡ ಬಿಸಿಬಿಸಿ ಭಾರತೀಯ ತಿಂಡಿ ಮತ್ತು ಪಾನೀಯಗಳನ್ನು ಬಡಿಸಲಾಯಿತು. ಮೆನುವಿನಲ್ಲಿ ಸಮೋಸಾ, ಟಿಕ್ಕಾ, ಟೀ, ಕಾಫಿ, ಅನ್ನ, ರೋಟಿ, ಪರೋಟ, ಪಲ್ಯಗಳು ಮತ್ತು ಬಿರಿಯಾನಿ ಸೇರಿದ್ದವು. ಭಾರತೀಯ ಕಂಪನಿಗಳ ಲಾಂಜ್ಗಳಲ್ಲೂ ಇದೇ ವಾತಾವರಣ ಕಂಡುಬಂತು.
ಇದೂ ಓದಿ: ಸರ್ಕಾರಿ ಆದೇಶದ ವಿರುದ್ಧ ಹೈಕೋರ್ಟ್ ಮೆಟ್ಟಿಲೇರಿದ ಬೆಂಗಳೂರು ಹೋಟೆಲುಗಳ ಸಂಘ
ಇದೂ ಓದಿ: ʼಹಳ್ಳಿಮನೆʼ ಸಂಜೀವ ರಾವ್ ಅವರಿಗೆ ʼಬಿಎಚ್ಎ ಜೀವಮಾನದ ಸಾಧನೆ ಪ್ರಶಸ್ತಿʼ
ಇದೂ ಓದಿ: ಹೋಟೆಲಿಗರಿಗೆ ಸಮಸ್ಯೆ ಆದಾಗ ನಾವಿದ್ದೇವೆ: ಬಿಎಚ್ಎ ನೂತನ ಅಧ್ಯಕ್ಷ ಎಚ್.ಎಸ್. ಸುಬ್ರಹ್ಮಣ್ಯ ಹೊಳ್ಳ



