ಒಳಗೇನಿದೆ!?

ಅಯೋಧ್ಯೆಯಲ್ಲಿ ಉದ್ಘಾಟನೆ ಆಗಲಿದೆ ಕನ್ನಡಿಗರ ವಸತಿಗೃಹ ‘ಹೋಟೆಲ್ ಬೆಂಗಳೂರು ವಿಸ್ಟಾ’

ಹೋಟೆಲ್‌ ಕನ್ನಡ, ಬೆಂಗಳೂರು: ಶ್ರೀರಾಮನ ಪವಿತ್ರ ನಗರಿ ಉತ್ತರಪ್ರದೇಶದ ಅಯೋಧ್ಯೆಯಲ್ಲಿ ಕನ್ನಡಿಗರ ಮಾಲೀಕತ್ವದ ವೈಭವೋಪೇತ ವಸತಿಗೃಹ ನಿರ್ಮಾಣಗೊಂಡಿದ್ದು, ಇದೇ ಜೂನ್‌ 29ರಂದು ಅದ್ಧೂರಿಯಾಗಿ ಉದ್ಘಾಟನೆ ಆಗಲಿದೆ.

ʼಹೋಟೆಲ್‌ ಬೆಂಗಳೂರು ವಿಸ್ಟಾʼ ಎಂಬ ಹೆಸರಿನ ಈ ವಸತಿಗೃಹ ಅಯೋಧ್ಯೆಯಲ್ಲಿ ಭಕ್ತಾದಿಗಳಿಗೆ ದೈವಿಕ ವಾಸ್ತವ್ಯದ ಅನುಭವ ನೀಡುವ ಸಲುವಾಗಿ ಜೂನ್‌ 29ರ ಸೋಮವಾರ ಸಂಜೆ 6.30ರಿಂದ ಸೇವೆಗೆ ತೆರೆದುಕೊಳ್ಳಲಿದೆ.

ಇದೂ ಓದಿ: ಅಯೋಧ್ಯೆಯಲ್ಲಿ ‘ಬೆಂಗಳೂರು ಕೆಫೆ’: ರಾಮ ಜನ್ಮಭೂಮಿಯಲ್ಲಿ ಈಗ ಉಡುಪಿಯ ನೈಜ ರುಚಿಯ ಹೋಟೆಲ್

ಅಯೋಧ್ಯೆಯ ಬಸಂತಿಯಾ ಪಟ್ಟಿ ಮಹಂತ ರಾಮಚರಣ ದಾಸ, ಕರ್ನಾಟಕದ ಮಾಜಿ ಡಿಸಿಎಂ, ಮಲ್ಲೇಶ್ವರ ಶಾಸಕ ಡಾ.ಸಿ.ಎನ್.ಅಶ್ವತ್ಥನಾರಾಯಣ, ಅಯೋಧ್ಯೆ ಮೇಯರ್‌ ಮಹಂತ ಗಿರೀಶ್‌ ಪತಿ ತ್ರಿಪಾಠಿ, ವಿಶ್ವ ಹಿಂದೂ ಪರಿಷತ್‌ ಕೇಂದ್ರೀಯ ಕಾರ್ಯದರ್ಶಿ ಗೋಪಾಲ್‌, ರಾಷ್ಟ್ರೀಯ ಸ್ವಯಂಸೇವಕ ಸಂಘದ ದಕ್ಷಿಣ ಮಧ್ಯ ಕ್ಷೇತ್ರೀಯ ಕಾರ್ಯವಾಹ ಎನ್‌.ತಿಪ್ಪೇಸ್ವಾಮಿ, ಸ್ಥಳದ ಮಾಲೀಕರಾದ ಅಶೋಕ್‌ ವರ್ಮ ಮತ್ತು ಕುಟುಂಬಸ್ಥರು ಮುಖ್ಯ ಅತಿಥಿಗಳಾಗಿ ಪಾಲ್ಗೊಳ್ಳಲಿದ್ದಾರೆ.

ಕರ್ನಾಟಕದ ಎನ್.ಪಿ. ಮುನಿರಾಜು, ಬಿ.ಎನ್. ನರಸಿಂಹ, ಸುಬ್ರಹ್ಮಣ್ಯ ಕಾಂಚನ್ ಹಾಗೂ ಸುರೇಂದ್ರ ಕಾಂಚನ್ ಅವರ ಪಾಲುದಾರಿಕೆಯಲ್ಲಿ ನಿರ್ಮಾಣಗೊಂಡಿರುವ ಈ ವಸತಿಗೃಹವು ಅಯೋಧ್ಯೆಗೆ ಭೇಟಿ ನೀಡುವ ಪ್ರವಾಸಿಗರಿಗೆ ಹಾಗೂ ಭಕ್ತರಿಗೆ ಅತ್ಯುತ್ತಮ ದರ್ಜೆಯ ವಸತಿ ಸೌಕರ್ಯ ಒದಗಿಸಲಿದೆ.

ಇದೂ ಓದಿ: ಕುಂಭಮೇಳ: ಕನ್ನಡಿಗ ಯಾತ್ರಿಕರ ಮೆಚ್ಚುಗೆ ಗಳಿಸುತ್ತಿರುವ ಅಯೋಧ್ಯೆಯ ಉಡುಪಿ ಹೋಟೆಲ್

ಅದ್ಧೂರಿಯಾಗಿ ನಿರ್ಮಾಣಗೊಂಡಿರುವ ಈ ಮೂರು ಮಹಡಿಯ ವಸತಿಗೃಹದಲ್ಲಿ ಸುಸಜ್ಜಿತ ಹಾಗೂ ಹವಾನಿಯಂತ್ರಿತ 22 ಕೊಠಡಿಗಳು ಮಾತ್ರವಲ್ಲದೆ, ಸುಮಾರು 300 ಆಸನಗಳ ಸಾಮರ್ಥ್ಯದ ಪಾರ್ಟಿ ಹಾಲ್‌ ವ್ಯವಸ್ಥೆ ಕೂಡ ಇದೆ ಎಂದು ಪಾಲುದಾರರಲ್ಲಿ ಒಬ್ಬರಾಗಿರುವ ಬಿ.ಎನ್.ನರಸಿಂಹ ಅವರು ತಿಳಿಸಿದ್ದಾರೆ.

ಇದೂ ಓದಿ: ಅಮೆರಿಕದ ಪಿಟ್ಸ್‌ಬರ್ಗ್‌ನಲ್ಲಿ ಕುಂದಾಪುರದವರ ʼಉಡುಪಿ ಕೆಫೆʼ; ದ ಬೆಸ್ಟ್‌ ಹೋಟೆಲ್‌ ಎಂಬ ಮೆಚ್ಚುಗೆ

ವಿಳಾಸ: ಹೋಟೆಲ್‌ ಬೆಂಗಳೂರು ವಿಸ್ಟಾ, ಶ್ರೀ ಹರಿ ಸದನ್, ಜಿಯಾನ್‌ಪುರ ಗ್ರಾಮ, ಚೂಡಾಮಣಿ ಚೌರಾಹ ಹತ್ತಿರ, ಅಯೋಧ್ಯೆ – 224135, ಉತ್ತರ ಪ್ರದೇಶ.
ಸಂಪರ್ಕ ಸಂಖ್ಯೆ: 9044406499, 9044537499

ಇದೂ ಓದಿ: ಹೋಟೆಲೋದ್ಯಮಿಯ ನೇತೃತ್ವದಲ್ಲಿ ಬೃಹತ್‌ ದೇವತಾ ಕಾರ್ಯ, ನೀಲನಕ್ಷೆ ಅನಾವರಣ

ಇದೂ ಓದಿ: ಬೆಂಗಳೂರು ಹೋಟೆಲುಗಳ ಸಂಘದ ಸದಸ್ಯತ್ವ ಪಡೆಯುವುದು ಹೇಗೆ? ಅದಕ್ಕೆಂದೇ ಮಾಡಲಾಗಿದೆ ಹೊಸ ಸಮಿತಿ

ಇದೂ ಓದಿ: ದಿಗ್ಗಜ ಹೋಟೆಲಿಗರಿಗೂ ತಿಳಿಯಲಾಗಲಿಲ್ಲ ಇದೊಂದು ರಹಸ್ಯ!; ಕೆಲವು ಹೋಟೆಲ್‌ಗಳಲ್ಲಿದೆಯಾ ‘ಸ್ಥಳ ಮಹಿಮೆʼ?

ಸೋಷಿಯಲ್‌ ಮೀಡಿಯಾದಲ್ಲಿ ಹಂಚಿಕೊಳ್ಳಿ