ಒಳಗೇನಿದೆ!?

ಆನ್‌ಲೈನ್‌ ಕಂಪನಿ ವಿರುದ್ಧ ತಿರುಗಿಬಿದ್ದ ಹೋಟೆಲ್ ಮಾಲೀಕರು: ಜಂಟಿ ಹೋರಾಟಕ್ಕೆ ಕರೆ

ಹೋಟೆಲ್‌ ಕನ್ನಡ, ಬೆಂಗಳೂರು: ಆನ್‌ಲೈನ್ ಆಹಾರ ವಿತರಣಾ ಸಂಸ್ಥೆ ‘ಸ್ವಿಗ್ಗಿ’ (Swiggy) ತಮ್ಮ ಮೇಲೆ ನಿರಂತರ ಶೋಷಣೆ ಹಾಗೂ ಅತಿಯಾದ ಕಮಿಷನ್ ದಂಧೆ ನಡೆಸುತ್ತಿದೆ ಎಂದು ಆರೋಪಿಸಿರುವ ಹೋಟೆಲ್ ಮಾಲೀಕರು, ಇದೀಗ ಅದರ ವಿರುದ್ಧ ಒಗ್ಗಟ್ಟಾಗಿ ಹೋರಾಡಲು ಮುಂದಾಗಿದ್ದಾರೆ.

ಸ್ವಿಗ್ಗಿಯ ಏಕಪಕ್ಷೀಯ ಧೋರಣೆಗೆ ಲಗಾಮು ಹಾಕಲು ಹೋಟೆಲ್ ಮಾಲೀಕರು ಸಮಾಲೋಚನಾ ಸಭೆಯೊಂದನ್ನು ಆಯೋಜಿಸಿದ್ದಾರೆ.

ಇದೂ ಓದಿ: ಹೋಟೆಲಿಗರಿಗೆ ಸಮಸ್ಯೆ ಆದಾಗ ನಾವಿದ್ದೇವೆ: ಬಿಎಚ್‌ಎ ನೂತನ ಅಧ್ಯಕ್ಷ ಎಚ್‌.ಎಸ್. ಸುಬ್ರಹ್ಮಣ್ಯ ಹೊಳ್ಳ

ʼನಮ್ಮ ಕಷ್ಟ ದುಡಿಮೆಯ ಪಾಲನ್ನು ಇನ್ಯಾರಿಗೋ ಯಾಕೆ ಹಂಚಿಕೊಳ್ಳಬೇಕು? ನಮ್ಮ ದುಡಿಮೆ – ನಮ್ಮ ವ್ಯವಹಾರ – ನಮ್ಮ ಹಕ್ಕು!ʼ ಎಂದು ಪ್ರತಿಪಾದಿಸುತ್ತಿರುವ ಹೋಟೆಲ್ ಉದ್ಯಮಿಗಳು ತಮಗಾಗುತ್ತಿರುವ ಅನ್ಯಾಯದ ವಿರುದ್ಧ ಸಿಡಿದೇಳಲು ಮುಂದಾಗಿದ್ದಾರೆ.

ಇದೂ ಓದಿ:ಸ್ವಿಗ್ಗಿಗೆ ಹೋಟೆಲ್‌ ಉದ್ಯಮಿಗಳಿಂದ ಬಹಿಷ್ಕಾರ: ಎಲ್ಲಿ, ಏಕೆ, ಎಂದಿನಿಂದ? ಇಲ್ಲಿದೆ ವಿವರ…

ಆರೋಪಗಳೇನು?
  • ಅತಿಯಾದ ಕಮಿಷನ್ ದಂಧೆ: ಸ್ವಿಗ್ಗಿ ಸಂಸ್ಥೆ ಪ್ರತಿ ಆರ್ಡರ್ ಮೇಲೂ ಶೇ. 35-45ರಷ್ಟು ಭಾರಿ ಕಮಿಷನ್ ಪಡೆಯುತ್ತಿದ್ದು, ಇದು ಹೋಟೆಲ್‌ಗಳ ನಿವ್ವಳ ಲಾಭಕ್ಕೆ ಮರಣಶಾಸನವಾಗಿದೆ.
  • ಒಪ್ಪಿಗೆ ಇಲ್ಲದ ಆಫರ್‌ಗಳು: ಹೋಟೆಲ್ ಮಾಲೀಕರ ಪೂರ್ವ ಅನುಮತಿ ಅಥವಾ ಒಪ್ಪಿಗೆ ಇಲ್ಲದೆ ಅವರ ಹೋಟೆಲ್ ಅಕೌಂಟ್‌ಗಳಲ್ಲಿ ಗ್ರಾಹಕರಿಗೆ ರಿಯಾಯಿತಿ ಆಫರ್‌ ನೀಡಲಾಗುತ್ತಿದೆ.
  • ಕ್ಯಾನ್ಸಲೇಷನ್ ಹೆಸರಲ್ಲಿ ದ್ರೋಹ: ಆರ್ಡರ್ ಕ್ಯಾನ್ಸಲ್ ಆದಾಗ ಹೋಟೆಲ್‌ಗಳಿಗೆ ಮೋಸ ಮಾಡಲಾಗುತ್ತಿದೆ.
  • ಮಾರ್ಕೆಟಿಂಗ್ ಹೆಸರಲ್ಲಿ ವಂಚನೆ: ಮಾರ್ಕೆಟಿಂಗ್/ಪ್ರಚಾರದ ಹೆಸರಿನಲ್ಲಿ ಹೋಟೆಲ್‌ಗಳಿಂದ ದೊಡ್ಡ ಮಟ್ಟದ ಹಣ ಲೂಟಿ ಮಾಡಲಾಗುತ್ತಿದೆ.

ಇದೂ ಓದಿ: ಬೆಂಗಳೂರು ಹೋಟೆಲುಗಳ ಸಂಘದ ಸದಸ್ಯತ್ವ ಪಡೆಯುವುದು ಹೇಗೆ? ಅದಕ್ಕೆಂದೇ ಮಾಡಲಾಗಿದೆ ಹೊಸ ಸಮಿತಿ

ಜಂಟಿ ಸಮಾಲೋಚನೆಗೆ ಕರೆ

ತಮಗಾಗುತ್ತಿರುವ ಈ ಎಲ್ಲ ಸಮಸ್ಯೆಗಳ ವಿರುದ್ಧ ಒಟ್ಟಾಗಿ ಧ್ವನಿ ಎತ್ತಲು ಮತ್ತು ಹೋಟೆಲ್ ಮಾಲೀಕರ ಹಕ್ಕುಗಳನ್ನು ಕಾಪಾಡಿಕೊಳ್ಳಲು “ಒಂದುಗೂಡೋಣ! ನಮ್ಮ ಹಕ್ಕುಗಳನ್ನು ಕಾಪಾಡೋಣ!” ಎಂಬ ಘೋಷಣೆಯೊಂದಿಗೆ ಜಂಟಿ ಸಮಾಲೋಚನಾ ಸಭೆ ಕರೆಯಲಾಗಿದೆ.

ಇದೂ ಓದಿ: ಹೋಟೆಲೋದ್ಯಮಿಯ ನೇತೃತ್ವದಲ್ಲಿ ಬೃಹತ್‌ ದೇವತಾ ಕಾರ್ಯ, ನೀಲನಕ್ಷೆ ಅನಾವರಣ

ಇದರ ಸಲುವಾಗಿ ಒಗ್ಗೂಡಲು ವಾಟ್ಸ್ಯಾಪ್‌ ಗ್ರೂಪ್‌ ಕೂಡ ರಚಿಸಲಾಗಿದೆ. ಹೋರಾಟಕ್ಕೆ  ಸಂಬಂಧಿಸಿದಂತೆ ಪೋಸ್ಟರ್‌ ರಚಿಸಿ ಹರಿಬಿಡಲಾಗಿದ್ದು, ಆಸಕ್ತರು ತಮ್ಮೊಂದಿಗೆ ಸೇರಿಕೊಳ್ಳುವಂತೆ ಮನವಿ ಮಾಡಿಕೊಳ್ಳಲಾಗಿದೆ. ಹೆಚ್ಚಿನ ಮಾಹಿತಿ ಹಾಗೂ ಹೋರಾಟದಲ್ಲಿ ಭಾಗಿಯಾಗಲು ಸಂಪರ್ಕಿಸಬೇಕಾದ ಮೊಬೈಲ್‌ಫೋನ್‌ ಸಂಖ್ಯೆಗಳು: 9591843474,  9844015081

ಇದೂ ಓದಿ: ದಿಗ್ಗಜ ಹೋಟೆಲಿಗರಿಗೂ ತಿಳಿಯಲಾಗಲಿಲ್ಲ ಇದೊಂದು ರಹಸ್ಯ!; ಕೆಲವು ಹೋಟೆಲ್‌ಗಳಲ್ಲಿದೆಯಾ ‘ಸ್ಥಳ ಮಹಿಮೆʼ?

ಇದೂ ಓದಿ: ಹೋಟೆಲ್-ರೆಸ್ಟೋರೆಂಟ್​ ಬಿಲ್‌ನಲ್ಲಿ ‘ಗ್ಯಾಸ್ ಶುಲ್ಕ’ ವಿಧಿಸುವಂತಿಲ್ಲ: ಸಿಸಿಪಿಎ ಖಡಕ್ ಎಚ್ಚರಿಕೆ

ಇದೂ ಓದಿ: ಕಾಫಿಗಿದೆ ಸಾವನ್ನೂ ಮುಂದೂಡುವ ಶಕ್ತಿ: ಕಾಫಿ ಹೇಗಿರಬೇಕು, ಎಷ್ಟು ಕುಡಿಯಬೇಕು?

ಸೋಷಿಯಲ್‌ ಮೀಡಿಯಾದಲ್ಲಿ ಹಂಚಿಕೊಳ್ಳಿ