ಹೋಟೆಲ್ ಕನ್ನಡ, ಬೆಂಗಳೂರು: ಶ್ರೀರಾಮನ ಪವಿತ್ರ ನಗರಿ ಉತ್ತರಪ್ರದೇಶದ ಅಯೋಧ್ಯೆಯಲ್ಲಿ ಕನ್ನಡಿಗರ ಮಾಲೀಕತ್ವದ ವೈಭವೋಪೇತ ವಸತಿಗೃಹ ʼಹೋಟೆಲ್ ಬೆಂಗಳೂರು ವಿಸ್ತಾʼ ಇದೇ ಜೂನ್ 29ರಂದು ಅದ್ಧೂರಿಯಾಗಿ ಉದ್ಘಾಟನೆಯಾಗಿದೆ.
ಅಯೋಧ್ಯೆಯ ಜಿಯಾನ್‌ಪುರ ಗ್ರಾಮದಲ್ಲಿ ನಿರ್ಮಾಣವಾಗಿರುವ ಕನ್ನಡಿಗರ ಮಾಲೀಕತ್ವದ ಈ ಹೋಟೆಲನ್ನು ವಿಶ್ವ ಹಿಂದೂ ಪರಿಷತ್ ಕೇಂದ್ರೀಯ ಕಾರ್ಯದರ್ಶಿ ಗೋಪಾಲ್ ಅವರು ಉದ್ಘಾಟಿಸಿದರು.
ಇದೂ ಓದಿ: ಅಮೆರಿಕದ ಪಿಟ್ಸ್‌ಬರ್ಗ್‌ನಲ್ಲಿ ಕುಂದಾಪುರದವರ ʼಉಡುಪಿ ಕೆಫೆʼ; ದ ಬೆಸ್ಟ್ ಹೋಟೆಲ್ ಎಂಬ ಮೆಚ್ಚುಗೆ
ಅಯೋಧ್ಯೆಯ ಬಸಂತಿಯಾ ಪಟ್ಟಿ ಮಹಂತ ರಾಮಚರಣ ದಾಸ, ಕರ್ನಾಟಕದ ಮಾಜಿ ಡಿಸಿಎಂ, ಅಯೋಧ್ಯೆ ಮೇಯರ್ ಮಹಂತ ಗಿರೀಶ್ ಪತಿ ತ್ರಿಪಾಠಿ, ರಾಷ್ಟ್ರೀಯ ಸ್ವಯಂಸೇವಕ ಸಂಘದ ದಕ್ಷಿಣ ಮಧ್ಯ ಕ್ಷೇತ್ರೀಯ ಕಾರ್ಯವಾಹ ಎನ್.ತಿಪ್ಪೇಸ್ವಾಮಿ, ಸ್ಥಳದ ಮಾಲೀಕರಾದ ಅಶೋಕ್ ವರ್ಮ ಮತ್ತು ಕುಟುಂಬಸ್ಥರು ಮುಖ್ಯ ಅತಿಥಿಗಳಾಗಿ ಪಾಲ್ಗೊಂಡಿದ್ದರು.

ದಕ್ಷಿಣ ಭಾರತದ ಆಹಾರವಾದ ಇಡ್ಲಿ-ದೋಸೆಗಳನ್ನು ಉತ್ತರ ಭಾರತದ ಜನರು ಒಪ್ಪಿಕೊಂಡಿದ್ದಾರೆ ಎಂದ ಗೋಪಾಲ್ ಅವರು, ಇಲ್ಲಿ ಸಾಧುಗಳಿಗೆ ವೈಷ್ಣವ ಭೋಜನ ಪದ್ಧತಿ ಅಳವಡಿಸಿಕೊಳ್ಳಲು ಸಲಹೆ ನೀಡಿದ್ದಾರೆ. ಅಲ್ಲದೆ, ಅಯೋಧ್ಯೆಯಲ್ಲಿ ಈಗಾಗಲೇ ನಡೆಯುತ್ತಿರುವ ʼಬೆಂಗಳೂರು ಕೆಫೆʼ ಸೇವೆ ಹಾಗೂ ಆಹಾರದ ಗುಣಮಟ್ಟವನ್ನು ಶ್ಲಾಘಿಸಿ ಅಭಿನಂದಿಸಿದ್ದಾರೆ.

ಕರ್ನಾಟಕದ ಎನ್.ಪಿ. ಮುನಿರಾಜು, ಬಿ.ಎನ್. ನರಸಿಂಹ, ಸುಬ್ರಹ್ಮಣ್ಯ ಕಾಂಚನ್ ಹಾಗೂ ಸುರೇಂದ್ರ ಕಾಂಚನ್ ಅವರ ಪಾಲುದಾರಿಕೆಯಲ್ಲಿ ʼಹೋಟೆಲ್ ಬೆಂಗಳೂರು ವಿಸ್ತಾʼ ನಿರ್ಮಾಣಗೊಂಡಿದ್ದು, ಇಲ್ಲಿನ ವಸತಿಗೃಹವು ಅಯೋಧ್ಯೆಗೆ ಭೇಟಿ ನೀಡುವ ಪ್ರವಾಸಿಗರಿಗೆ ಹಾಗೂ ಭಕ್ತರಿಗೆ ಅತ್ಯುತ್ತಮ ದರ್ಜೆಯ ವಸತಿ ಸೌಕರ್ಯ ಒದಗಿಸಲಿದೆ.

ಅದ್ಧೂರಿಯಾಗಿ ನಿರ್ಮಾಣಗೊಂಡಿರುವ ಈ ಮೂರು ಮಹಡಿಯ ವಸತಿಗೃಹದಲ್ಲಿ ಸುಸಜ್ಜಿತ ಹಾಗೂ ಹವಾನಿಯಂತ್ರಿತ 22 ಕೊಠಡಿಗಳು ಮಾತ್ರವಲ್ಲದೆ, ಸುಮಾರು 300 ಆಸನಗಳ ಸಾಮರ್ಥ್ಯದ ಪಾರ್ಟಿ ಹಾಲ್ ವ್ಯವಸ್ಥೆ ಕೂಡ ಇದೆ ಎಂದು ಪಾಲುದಾರರಲ್ಲಿ ಒಬ್ಬರಾಗಿರುವ ಬಿ.ಎನ್.ನರಸಿಂಹ ಅವರು ತಿಳಿಸಿದ್ದಾರೆ.

ಬೀಜಾಡಿ, ಗೋಪಾಡಿಯ ಶ್ರೀ ರಾಮ ಭಜನಾ ಮಂದಿರ, ಕೋಟತಟ್ಟು-ಪಡುಕರೆಯ ಶ್ರೀ ಭಗವತ್ ಭಜನಾ ಮಂದಿರದವರು ಬೆಂಗಳೂರು ವಿಸ್ತಾದ ಮುಂಭಾಗದಲ್ಲಿ ಅಭೂತಪೂರ್ವ ಕುಣಿತ ಭಜನೆ, ಕೋಲಾಟ ಪ್ರದರ್ಶಿಸಿದರು.

ಇದೂ ಓದಿ: ಕುಂಭಮೇಳ: ಕನ್ನಡಿಗ ಯಾತ್ರಿಕರ ಮೆಚ್ಚುಗೆ ಗಳಿಸುತ್ತಿರುವ ಅಯೋಧ್ಯೆಯ ಉಡುಪಿ ಹೋಟೆಲ್
ಉದ್ಘಾಟನಾ ಕಾರ್ಯಕ್ರಮದಲ್ಲಿ ಪಾಲುದಾರರಾದ ಸುರೇಂದ್ರ ಕಾಂಚನ್ ಅವರು ಸ್ವಾಗತಿಸಿದ್ದು, ಮುನಿರಾಜು ಅವರು ಧನ್ಯವಾದ ಸಮರ್ಪಿಸಿದರು. ಉದ್ಯಮಿಗಳಾದ ರವೀಂದ್ರ ಆಚಾರ್ಯ, ದಿನೇಶ್ ವೈದ್ಯ ಅಂಪಾರು, ಮನೋಹರ್ ರೆಡ್ಡಿ ಮುಂತಾದವರು ಉಪಸ್ಥಿತರಿದ್ದರು.

ಇದೂ ಓದಿ: ದರದ ಕಾರಣಕ್ಕೇ ಆದರಕ್ಕೆ ಪಾತ್ರವಾಗುತ್ತಿರುವ ʼತಾಜಾ ತಿಂಡಿʼ; ಆ ರೇಟು, ಏನದರ ಸೀಕ್ರೇಟು?

ಇದೂ ಓದಿ: ಬೆಂಗಳೂರು ಹೋಟೆಲುಗಳ ಸಂಘದ ಸದಸ್ಯತ್ವ ಪಡೆಯುವುದು ಹೇಗೆ? ಅದಕ್ಕೆಂದೇ ಮಾಡಲಾಗಿದೆ ಹೊಸ ಸಮಿತಿ

ಇದೂ ಓದಿ: ಹೋಟೆಲೋದ್ಯಮಿಯ ನೇತೃತ್ವದಲ್ಲಿ ಬೃಹತ್ ದೇವತಾ ಕಾರ್ಯ, ನೀಲನಕ್ಷೆ ಅನಾವರಣ

ಇದೂ ಓದಿ: ಹೋಟೆಲ್ ಉದ್ಯಮಕ್ಕಿಳಿದ ಸಿನಿಮಾ ನಿರ್ದೇಶಕ; ತಾತ ನಡೆಸುತ್ತಿದ್ದ ಹೋಟೆಲ್‌ಗೆ ಮೊಮ್ಮಗನ ನೇತೃತ್ವ

ಇದೂ ಓದಿ: ‘ದರ್ಶಿನಿ ಬ್ರಹ್ಮ’ ಆರ್. ಪ್ರಭಾಕರ್ ಅವರಿಗೆ ‘ಅಸಾಮಾನ್ಯ ಕನ್ನಡಿಗ’ ಪುರಸ್ಕಾರ

ಇದೂ ಓದಿ: ಸೌಟು ಹಿಡಿದಿದ್ದ ಕೈಯಲ್ಲೀಗ ಬೃಹತ್ ಸಾರಿಗೆ ಸಂಘಟನೆಯ ಸ್ಟೇರಿಂಗ್!

ಇದೂ ಓದಿ: ʼಬ್ರಾಹ್ಮಣರ ಕಾಫಿ ಬಾರ್ʼ ನನ್ನ ಬದುಕಿನ ಗತಿ ಬದಲಿಸಿದ ಸ್ಥಳ: ವಿಶ್ವವಾಣಿ ಪ್ರಧಾನ ಸಂಪಾದಕ ವಿಶ್ವೇಶ್ವರ ಭಟ್

ವಿಳಾಸ: ಹೋಟೆಲ್ ಬೆಂಗಳೂರು ವಿಸ್ತಾ, ಶ್ರೀ ಹರಿ ಸದನ್, ಜಿಯಾನ್‌ಪುರ ಗ್ರಾಮ, ಚೂಡಾಮಣಿ ಚೌರಾಹ ಹತ್ತಿರ, ಅಯೋಧ್ಯೆ – 224135, ಉತ್ತರ ಪ್ರದೇಶ.
ಸಂಪರ್ಕ ಸಂಖ್ಯೆ: 9044406499, 9044537499
ಇದೂ ಓದಿ: ಹೋಟೆಲ್-ಪ್ರವಾಸೋದ್ಯಮ ಕ್ಷೇತ್ರದ ಗಣ್ಯರ ಜೊತೆ ಚರ್ಚಿಸಿದ ಸಿಎಂ; ಇಲ್ಲಿದೆ ಸಂಪೂರ್ಣ ವಿವರ..

ಇದೂ ಓದಿ: ಹೋಟೆಲಿಗರಿಗೆ ಸಮಸ್ಯೆ ಆದಾಗ ನಾವಿದ್ದೇವೆ: ಬಿಎಚ್‌ಎ ನೂತನ ಅಧ್ಯಕ್ಷ ಎಚ್.ಎಸ್. ಸುಬ್ರಹ್ಮಣ್ಯ ಹೊಳ್ಳ
ಇದೂ ಓದಿ: ಬೃಹತ್ ಬೆಂಗಳೂರು ಹೋಟೆಲುಗಳ ಸಂಘಕ್ಕೆ ನೂತನ ಪದಾಧಿಕಾರಿಗಳ ಆಯ್ಕೆ
ಇದೂ ಓದಿ: ಬಿಬಿಎಚ್‌ಎನಿಂದ 500ಕ್ಕೂ ಅಧಿಕ ಮಂದಿಗೆ ಎಫ್‌ಎಸ್‌ಎಸ್ಎಐ ಫಾಸ್ಟ್ಯಾಕ್ ಟ್ರೇನಿಂಗ್



