ಹೋಟೆಲ್ ಕನ್ನಡ, ಬೆಂಗಳೂರು: ದೇಶದ ಯಾವುದೋ ಭಾಗದಲ್ಲಿ ತನ್ನ ಉದ್ಯೋಗಿಗಳಿಗೆ ಉದ್ಯೋಗದಾತರು ಕಾರುಗಳನ್ನು ಉಡುಗೊರೆಯಾಗಿ ನೀಡಿದ ಸುದ್ದಿಯನ್ನು ಆಗಾಗ ಕೇಳುತ್ತಿರುತ್ತೇವೆ. ಇದೀಗ ಅಂಥ ಸುದ್ದಿ ನಮ್ಮ ಕರ್ನಾಟಕದಲ್ಲಿ, ಅದೂ ಬೆಂಗಳೂರಿನಲ್ಲೇ ಕೇಳುವಂತಾಗಿದೆ.
ಆಂಧ್ರ ಶೈಲಿಯ ರುಚಿಕರ ಆಹಾರ ಪದಾರ್ಥಗಳಿಗೆ ಪ್ರಸಿದ್ಧಿ ಪಡೆದಿರುವ ʼನಂದನ ಗ್ರೂಪ್ʼ ಸಂಸ್ಥಾಪಕ ಡಾ.ರವಿಚಂದರ್ ಅವರು ತಮ್ಮ ಉದ್ಯೋಗಿಗಳಿಗೆ ಕಾರು-ದ್ವಿಚಕ್ರ ವಾಹನಗಳನ್ನು ಉಡುಗೊರೆಯಾಗಿ ನೀಡುವ ಮೂಲಕ ರಾಜ್ಯದ ಗಮನ ಸೆಳೆದಿದ್ದಾರೆ.
ಬೆಂಗಳೂರಿನಲ್ಲಿ ನ.11ರ ಬುಧವಾರ ಇದಕ್ಕೆಂದೇ ʼಅಚೀವರ್ಸ್ ಅವಾರ್ಡ್ʼ ಎಂಬ ಕಾರ್ಯಕ್ರಮ ಆಯೋಜಿಸಿದ ರವಿಚಂದರ್, ಖ್ಯಾತ ಚಿತ್ರನಟ-ನಿರ್ದೇಶಕ ರಮೇಶ್ ಅರವಿಂದ್ ಅವರ ಮುಖೇನ ಈ ವಾಹನಗಳ ಕೀಗಳನ್ನು ಹಸ್ತಾಂತರಿಸುವ ಮೂಲಕ ತಮ್ಮ ಉದ್ಯೋಗಿಗಳಿಗೆ ದುಬಾರಿ ಉಡುಗೊರೆ ನೀಡಿದ್ದಾರೆ.
ಇದೂ ಓದಿ: ಎಫ್ಕೆಸಿಸಿಐ ಪ್ರವಾಸೋದ್ಯಮ ಸಮಿತಿ ಅಧ್ಯಕ್ಷರಾಗಿ ಕೆ. ರಾಧಾಕೃಷ್ಣ ಹೊಳ್ಳ ನೇಮಕ
ಮುಖ್ಯ ಅತಿಥಿಯಾಗಿ ಆಗಮಿಸಿದ ನಟ ರಮೇಶ್ ಅರವಿಂದ್, 37 ವರ್ಷಗಳ ಯಶಸ್ವಿ ಪಯಣಕ್ಕಾಗಿ ಡಾ. ರವಿಚಂದರ್ ಮತ್ತು ನಂದನ ತಂಡವನ್ನು ಅಭಿನಂದಿಸಿದರು. ಯಾವುದೇ ಸಂಸ್ಥೆಯ ಬೆಳವಣಿಗೆ ಕೇವಲ ಮಾಲೀಕರಿಂದ ಆಗುವುದಿಲ್ಲ, ಅದಕ್ಕೆ ಸಿಬ್ಬಂದಿಯ ನಿಷ್ಠೆ, ಪ್ರಾಮಾಣಿಕತೆ ಮತ್ತು ಗ್ರಾಹಕರ ಸೇವೆ ಅತ್ಯಗತ್ಯ ಎಂದು ಶ್ಲಾಘಿಸಿದರು.
ಇದೂ ಓದಿ: ಹೋಟೆಲ್ ಉದ್ಯಮದಾರರ ಸಹಕಾರ ಬ್ಯಾಂಕ್ ನಿರ್ದೇಶಕರಾಗಿ 27 ವರ್ಷಗಳ ಕಾಲ ಸೇವೆ ಸಲ್ಲಿಸಿದ ಬಿ.ಎಸ್. ಮಂಜುನಾಥ್
ಮೂವತ್ತೇಳು ವರ್ಷಗಳ ಯಶಸ್ವಿ ಪ್ರಯಾಣದ ಹಿನ್ನೆಲೆಯಲ್ಲಿ 37 ಸಾಧಕರಿಗೆ 37 ಉಡುಗೊರೆಗಳನ್ನು ನೀಡಿದ ಕಾರ್ಯವನ್ನು ಮೆಚ್ಚಿದ ಅವರು, ತಮ್ಮ ಜೊತೆಗಿದ್ದವರನ್ನು ಗುರುತಿಸಿ ಗೌರವಿಸುವ ಈ ಗುಣವು ಅತ್ಯದ್ಭುತ ಎಂದರು. ನಂದನ ಬ್ರ್ಯಾಂಡ್ ಮುಂದಿನ ದಿನಗಳಲ್ಲಿ ರಾಷ್ಟ್ರೀಯ ಮತ್ತು ಜಾಗತಿಕ ಮಟ್ಟದಲ್ಲಿ ಬೆಳೆಯಲಿ ಎಂದು ಶುಭ ಹಾರೈಸಿದರು.
ಇದೂ ಓದಿ: ಹತ್ತು ಲಕ್ಷ ರೂ. ಮೌಲ್ಯದ ಚಿನ್ನದ ಸರ ಗ್ರಾಹಕರಿಗೆ ಮರಳಿಸಿ ಪ್ರಾಮಾಣಿಕತೆ ಮೆರೆದ ಹೋಟೆಲ್ ಕಾರ್ಮಿಕ
ನಂದನ ಸಮೂಹದ ಚೇರ್ಮನ್ ಹಾಗೂ ಮ್ಯಾನೇಜಿಂಗ್ ಡೈರೆಕ್ಟರ್ ಆಗಿರುವ ಡಾ. ರವಿಚಂದರ್, ತಮ್ಮ ಬದುಕಿನ ಮಹತ್ವದ ತಿರುವುಗಳಲ್ಲಿ ನಟಿ ಸುಹಾಸಿನಿ ಮತ್ತು ನಟ ರಮೇಶ್ ಅರವಿಂದ್ ಅವರ ಪಾತ್ರ ಬಹಳ ದೊಡ್ಡದು ಎಂದು ಸ್ಮರಿಸಿದರು. ನಾನು ಬ್ಯಾಂಕ್ ಕೆಲಸ ಬಿಟ್ಟು ಹೋಟೆಲ್ ಉದ್ಯಮಕ್ಕೆ ಬಂದೆ. ಬದುಕಿನಲ್ಲಿ ಎಷ್ಟೇ ಕಷ್ಟ ಇದ್ದರೂ ಗೆಲ್ಲಬೇಕೆಂಬ ಛಲವನ್ನು ʼಮನತಿಲ್ ಉರುತಿ ವೆಂಡಂʼ ಸಿನಿಮಾ ನೋಡಿ ಕಲಿತೆ. ನಾನು ಇಂದು ಇಷ್ಟರಮಟ್ಟಿಗೆ ಬೆಳೆದಿರುವುದಕ್ಕೆ ನನ್ನ ಜೊತೆಗಿರುವ ಸಿಬ್ಬಂದಿಯ ಪರಿಶ್ರಮವೇ ಕಾರಣ. ಹೀಗಾಗಿ ಅವರಿಗೆ ಕೃತಜ್ಞತೆ ಸಲ್ಲಿಸುವ ಸಲುವಾಗಿ ಈ ಉಡುಗೊರೆ ನೀಡುತ್ತಿದ್ದೇನೆ ಎಂದು ತಿಳಿಸಿದರು.
ಇದೂ ಓದಿ: ʼಹಳ್ಳಿಮನೆʼ ಸಂಜೀವ ರಾವ್ ಅವರಿಗೆ ʼಬಿಎಚ್ಎ ಜೀವಮಾನದ ಸಾಧನೆ ಪ್ರಶಸ್ತಿʼ
ಈ 37 ವರ್ಷಗಳ ಪ್ರಯಾಣದಲ್ಲಿ ಉದ್ಯಮ ಆರಂಭಿಸಿದ ದಿನದಿಂದ ಜೊತೆಗಿರುವ ಮತ್ತು ಉತ್ತಮವಾಗಿ ಕಾರ್ಯ ನಿರ್ವಹಿಸಿದ ಬಾಣಸಿಗ, ಸಪ್ಲೈಯರ್, ಚಾಲಕ, ಮೇಲ್ವಿಚಾರಕ, ಜನರಲ್ ಮ್ಯಾನೇಜರ್ ಹಾಗೂ ಮ್ಯಾನೇಜರ್ ಸೇರಿ ವಿವಿಧ ಹಂತಗಳ ಕಾರ್ಮಿಕರನ್ನು ಗುರುತಿಸಿ ಅವರಲ್ಲಿ 12 ಮಂದಿಗೆ ಕಾರು ಹಾಗೂ 25 ಮಂದಿಗೆ ದ್ವಿಚಕ್ರ ವಾಹನ ನೀಡುತ್ತಿರುವುದಾಗಿ ತಿಳಿಸಿದರು.
ಇದೂ ಓದಿ: ಎಫ್ಕೆಸಿಸಿಐ ಸಮಿತಿ ಅಧ್ಯಕ್ಷರಾಗಿ ಪಿ.ಸಿ.ರಾವ್, ವೀರೇಂದ್ರ ಕಾಮತ್ ನೇಮಕ
ನಮ್ಮ ಈ ವ್ಯವಹಾರದ ಯಶಸ್ಸಿಗೆ ಪ್ರಮುಖವಾಗಿ ಮೂರು ಕಾರಣಗಳಿವೆ. ಅದರಲ್ಲಿ ಮೊದಲನೆಯದಾಗಿ ಗ್ರಾಹಕರು, ಅವರಿಲ್ಲದೆ ಸಂಸ್ಥೆಯ ಅಸ್ತಿತ್ವವಿಲ್ಲ. ಎರಡನೆಯದಾಗಿ ಉತ್ತಮ ಗುಣಮಟ್ಟದ ಆಹಾರ ಸಾಮಗ್ರಿಗಳ ಪೂರೈಕೆದಾರರು. ಮೂರನೆಯದಾಗಿ ನಮ್ಮ ನಂದನ ತಂಡ, ಅವರೇ ಈ ಸಂಸ್ಥೆಯ ಬೆನ್ನೆಲುಬು ಎಂದು ಡಾ.ರವಿಚಂದರ್ ಸ್ಮರಿಸಿದರು. ಅಲ್ಲದೆ, ದೇವರ ಆಶೀರ್ವಾದ ಮತ್ತು ಎಲ್ಲರ ಬೆಂಬಲದಿಂದ ʼನಂದನ ಬ್ರ್ಯಾಂಡ್ʼಅನ್ನು ಜಾಗತಿಕ ಮಟ್ಟಕ್ಕೆ ಕೊಂಡೊಯ್ಯುವ ಕನಸನ್ನೂ ಅವರು ಹಂಚಿಕೊಂಡರು.

ಇದೂ ಓದಿ: ಹೋಟೆಲ್ ಮಾಲೀಕರ ಖಾತೆಗೆ ಜಮೆ ಆಯ್ತು ಲಕ್ಷ ಲಕ್ಷ ಹಣ; ಒಟ್ಟು 3 ಕೋಟಿ ರೂಪಾಯಿಗೂ ಅಧಿಕ ಸಂದಾಯ
ಸಿಬ್ಬಂದಿಯ ಸಾಧನೆಯನ್ನು ಗುರುತಿಸಿ ಗೌರವಿಸುವ ನಿಟ್ಟಿನಲ್ಲಿ ಇದೊಂದು ಅತ್ಯಂತ ವಿಶಿಷ್ಟ ಹಾಗೂ ದೊಡ್ಡ ಮಟ್ಟದ ಪ್ರಶಸ್ತಿ ಪ್ರದಾನ ಮತ್ತು ಗೌರವ ಸಮಾರಂಭವಾಗಿದೆ ಎಂದು ಶ್ಲಾಘಿಸಿರುವ ಬೆಂಗಳೂರು ಹೋಟೆಲುಗಳ ಸಂಘದ ಗೌರವಾಧ್ಯಕ್ಷ ಪಿ.ಸಿ. ರಾವ್ ಅವರು, ಡಾ.ರವಿಚಂದರ್ ಹಾಗೂ ʼನಂದನ ಗ್ರೂಪ್ʼ ಎಲ್ಲರಿಗೂ ಹೃತ್ಪೂರ್ವಕ ಅಭಿನಂದನೆಗಳನ್ನು ಸಲ್ಲಿಸಿದ್ದಾರೆ.
ಇದೂ ಓದಿ: ಹೋಟೆಲಿಗರಿಗೆ ಸಮಸ್ಯೆ ಆದಾಗ ನಾವಿದ್ದೇವೆ: ಬಿಎಚ್ಎ ನೂತನ ಅಧ್ಯಕ್ಷ ಎಚ್.ಎಸ್. ಸುಬ್ರಹ್ಮಣ್ಯ ಹೊಳ್ಳ
ಇದೂ ಓದಿ: ಹೋಟೆಲಿಗರ ಹಣಕಾಸು ಗುಟ್ಟು, ಸ್ವಿಗ್ಗಿ-ಜೊಮ್ಯಾಟೊ ಕೈಯೊಳಗಿನ ಜುಟ್ಟು!: ಭಾರಿ ವಂಚನೆ ಬಹಿರಂಗ
ಇದೂ ಓದಿ: ಕಾವೇರಿ ಕಾರ್ಸ್@34: ಒಂದು ಲ್ಯಾಂಡ್ಲೈನ್ನಿಂದ ಆರಂಭ, ಇಂದು ಪ್ರತಿಷ್ಠಿತ ಕಾರ್ಪೋರೇಟ್ ಸಾರಿಗೆ ಸೇವಾ ಸಂಸ್ಥೆ



