ಒಳಗೇನಿದೆ!?

ಕರ್ನಾಟಕದ ಹೋಟೆಲೋದ್ಯಮ ಭಾರತಕ್ಕೆ ಮಾದರಿ: ಮಾಜಿ ಪೊಲೀಸ್‌ ಆಯುಕ್ತ ಭಾಸ್ಕರ್‌ ರಾವ್‌

91ನೇ ವಾರ್ಷಿಕ ಸರ್ವಸದಸ್ಯರ ಸಭೆಯಲ್ಲಿ ಬೆಂಗಳೂರು ಹೋಟೆಲುಗಳ ಸಂಘದ ಪದಾಧಿಕಾರಿಗಳು

ಹೋಟೆಲ್‌ ಕನ್ನಡ, ಬೆಂಗಳೂರು: ಕರ್ನಾಟಕದ ಅದರಲ್ಲೂ ಕರಾವಳಿಯವರ ಹೋಟೆಲೋದ್ಯಮ ಭಾರತಕ್ಕೇ ಮಾದರಿ ಆಗಬಲ್ಲಂಥದ್ದು ಎಂದು ಬೆಂಗಳೂರಿನ ಮಾಜಿ ಪೊಲೀಸ್‌ ಆಯುಕ್ತ ಭಾಸ್ಕರ್‌ ರಾವ್‌ ಅಭಿಪ್ರಾಯ ಪಟ್ಟಿದ್ದಾರೆ.

ಬೆಂಗಳೂರು ಹೋಟೆಲುಗಳ ಸಂಘವು ಹಿರಿಯ ಹೋಟೆಲ್‌ ಉದ್ಯಮಿಗಳನ್ನು ಗುರುತಿಸಿ ಗೌರವಿಸುವ ಸಲುವಾಗಿ ನ.13ರಂದು ರಾಜಧಾನಿಯ ಬೆಂಗಳೂರು ಗೇಟ್‌ ಹೋಟೆಲ್‌ನಲ್ಲಿ ಹಮ್ಮಿಕೊಂಡಿದ್ದ ʼಉದ್ಯಮ ಚೇತನʼ ಪ್ರಶಸ್ತಿ ಪ್ರದಾನ ಕಾರ್ಯಕ್ರಮಕ್ಕೆ ಮುಖ್ಯ ಅತಿಥಿಯಾಗಿ ಆಗಮಿಸಿದ ಭಾಸ್ಕರ್‌ ರಾವ್‌ ಈ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.

ಬೆಂಗಳೂರು ಹೋಟೆಲುಗಳ ಸಂಘದ 91ನೇ ವಾರ್ಷಿಕ ಸರ್ವ ಸದಸ್ಯರ ಸಭೆಯಲ್ಲಿ ಸಂಘದ ಪದಾಧಿಕಾರಿಗಳು.

ಇದೂ ಓದಿ: ಹೋಟೆಲ್‌ ಮಾಲೀಕರ ಖಾತೆಗೆ ಜಮೆ ಆಯ್ತು ಲಕ್ಷ ಲಕ್ಷ ಹಣ; ಒಟ್ಟು 3 ಕೋಟಿ ರೂಪಾಯಿಗೂ ಅಧಿಕ ಸಂದಾಯ

ಸಾಕಷ್ಟು ಸಮಸ್ಯೆಗಳ ನಡುವೆಯೇ ಉದ್ಯಮ ನಡೆಸಿಕೊಂಡು ಬರುತ್ತಿರುವ ಎಲ್ಲ ಹೋಟೆಲೋದ್ಯಮಿಗಳು ರಿಸ್ಕ್‌ ಟೇಕರ್ಸ್‌. ಅಲ್ಲದೆ ಯಾವುದೇ ತೆರಿಗೆ ಇತ್ಯಾದಿ ಬದ್ಧತೆ ಇರದ ಬೀದಿಬದಿಯ ವ್ಯಾಪಾರಸ್ಥರ ನಡುವೆ ಸಾಕಷ್ಟು ತೆರಿಗೆ ಪಾವತಿಸಿ ಉದ್ಯಮ ನಡೆಸುವುದು ಕೂಡ ಒಂದು ಸವಾಲು. ಆ ಕುರಿತು ಒಂದು ಅನುಕೂಲಕರ ವ್ಯವಸ್ಥೆ ರೂಪಿಸಿಕೊಳ್ಳುವ, ತೆರಿಗೆ ಇತ್ಯಾದಿಯಲ್ಲಿ ಒಂದು ಸಮರ್ಪಕ ಪ್ರಯೋಜನ ಪಡೆದುಕೊಳ್ಳುವ ನಿಟ್ಟಿನಲ್ಲಿ ಪ್ರಯತ್ನಗಳಾಗಲಿ ಎಂದು ಭಾಸ್ಕರ್‌ ರಾವ್‌ ಆಶಿಸಿದರು.

ಉದ್ಯಮ ಚೇತನ ಪ್ರಶಸ್ತಿ ಪುರಸ್ಕೃತರು

ಹಿರಿಯ ಹೋಟೆಲೋದ್ಯಮಿ ಜಿ.ಮಂಜುನಾಥ್‌ ಅವರಿಗೆ ಉದ್ಯಮ ಚೇತನ ಪ್ರಶಸ್ತಿ ಪ್ರದಾನ
ಹಿರಿಯ ಹೋಟೆಲೋದ್ಯಮಿ ಕೆ.ಕೇಶವ ಹೊಳ್ಳ ಅವರಿಗೆ ಉದ್ಯಮ ಚೇತನ ಪ್ರಶಸ್ತಿ ಪ್ರದಾನ
ಹಿರಿಯ ಹೋಟೆಲೋದ್ಯಮಿ ಎಚ್‌.ಬಿ.ರಾಜೀವ ಶೆಟ್ಟಿ ಅವರಿಗೆ ಉದ್ಯಮ ಚೇತನ ಪ್ರಶಸ್ತಿ ಪ್ರದಾನ
ಹಿರಿಯ ಹೋಟೆಲೋದ್ಯಮಿ ಎಸ್.ಎನ್.ಶ್ರೀನಿವಾಸಮೂರ್ತಿ ಅವರಿಗೆ ಉದ್ಯಮ ಚೇತನ ಪ್ರಶಸ್ತಿ ಪ್ರದಾನ
ಹಿರಿಯ ಹೋಟೆಲೋದ್ಯಮಿ ಪ್ರಭಾಕರ್‌ ಎನ್.‌ ಹೆಗಡೆ ಅವರಿಗೆ ಉದ್ಯಮ ಚೇತನ ಪ್ರಶಸ್ತಿ ಪ್ರದಾನ
ಹಿರಿಯ ಹೋಟೆಲೋದ್ಯಮಿ ದೇವದಾಸ್‌ ಡಿ. ನಾಯಕ್ ಅವರಿಗೆ ಉದ್ಯಮ ಚೇತನ ಪ್ರಶಸ್ತಿ ಪ್ರದಾನ
ಹಿರಿಯ ಹೋಟೆಲೋದ್ಯಮಿ ಕೆ.ವಿ.ಅಶ್ವತ್ಥನಾರಾಯಣ್‌ ಅವರಿಗೆ ಉದ್ಯಮ ಚೇತನ ಪ್ರಶಸ್ತಿ ಪ್ರದಾನ

ಹಿರಿಯ ಹೋಟೆಲ್‌ ಉದ್ಯಮಿಗಳಾದ ಎಚ್.ಬಿ.ರಾಜೀವ ಶೆಟ್ಟಿ, ಕೆ.ಕೇಶವ ಹೊಳ್ಳ, ದೇವದಾಸ್‌ ಡಿ. ನಾಯಕ್‌, ಜಿ.ಮಂಜುನಾಥ್‌, ಪ್ರಭಾಕರ್‌ ಎನ್‌. ಹೆಗಡೆ, ಕೆ.ವಿ.ಅಶ್ವತ್ಥನಾರಾಯಣ್‌ ಮತ್ತು ಎಸ್.ಎನ್‌. ಶ್ರೀನಿವಾಸಮೂರ್ತಿ ಅವರಿಗೆ ಉದ್ಯಮ ಚೇತನ ಪ್ರಶಸ್ತಿ ಪ್ರದಾನ ಮಾಡಲಾಯಿತು. ಅಲ್ಲದೆ, ಹೋಟೆಲ್‌ ಮಾಲೀಕರು ಮತ್ತು ಕಾರ್ಮಿಕರ ಪ್ರತಿಭಾವಂತ ಮಕ್ಕಳನ್ನು ಇದೇ ವೇಳೆ ಸನ್ಮಾನಿಸಲಾಯಿತು.

ಬೆಂಗಳೂರು ಹೋಟೆಲುಗಳ ಸಂಘದ 91ನೇ ವಾರ್ಷಿಕ ಸರ್ವಸದಸ್ಯರ ಸಭೆಯಲ್ಲಿ ಗೌರವಾಧ್ಯಕ್ಷ ಪಿ.ಸಿ.ರಾವ್‌ ಅವರ ಮಾತು.
ಬೆಂಗಳೂರು ಹೋಟೆಲುಗಳ ಸಂಘದ 91ನೇ ವಾರ್ಷಿಕ ಸರ್ವಸದಸ್ಯರ ಸಭೆಯಲ್ಲಿ ಅಧ್ಯಕ್ಷ ಎಚ್‌.ಎಸ್.ಸುಬ್ರಹ್ಮಣ್ಯ ಹೊಳ್ಳ ಅವರ ಮಾತು.
ಬೆಂಗಳೂರು ಹೋಟೆಲುಗಳ ಸಂಘದ 91ನೇ ವಾರ್ಷಿಕ ಸರ್ವಸದಸ್ಯರ ಸಭೆಯಲ್ಲಿ ಪ್ರಧಾನ ಕಾರ್ಯದರ್ಶಿ ವೀರೇಂದ್ರ ಎನ್.‌ ಕಾಮತ್‌ ಅವರ ಮಾತು.

ಇದೇ ಸಂದರ್ಭದಲ್ಲಿ ಬೆಂಗಳೂರು ಹೋಟೆಲುಗಳ ಸಂಘದ 91ನೇ ವಾರ್ಷಿಕ ಸರ್ವ ಸದಸ್ಯರ ಸಭೆಯೂ ನಡೆಯಿತು.  ಸಭೆಯಲ್ಲಿ ಮಾತನಾಡಿದ ಬೆಂಗಳೂರು ಹೋಟೆಲುಗಳ ಸಂಘದ ಗೌರವಾಧ್ಯಕ್ಷ ಪಿ.ಸಿ.ರಾವ್‌ ಅವರು, ನಂದಿನಿ ಹಾಲಿನ ದರ ಏರಿಕೆ ಸಂಬಂಧ ಶೀಘ್ರದಲ್ಲೇ ಕರ್ನಾಟಕ ಹಾಲು ಮಹಾಮಂಡಳದ ಅಧಿಕಾರಿಗಳನ್ನು ಭೇಟಿ ಮಾಡಿ ಚರ್ಚಿಸಲಾಗುವುದು ಎಂದು ತಿಳಿಸಿದರು. ಅಲ್ಲದೆ, ಹಾಲಿನ ದರ ಏರಿಕೆ ಹಿನ್ನೆಲೆಯಲ್ಲಿ ಉದ್ಭವಿಸಿರುವ ಬಿಕ್ಕಟ್ಟನ್ನು ಬಗೆಹರಿಸಲು ಉದ್ಯಮಿಗಳಿಗೆ ಸಲಹೆಗಳನ್ನು ನೀಡಿದರು.

ಇದೂ ಓದಿ: ಹೋಟೆಲಿಗರ ಹಣಕಾಸು ಗುಟ್ಟು, ಸ್ವಿಗ್ಗಿ-ಜೊಮ್ಯಾಟೊ ಕೈಯೊಳಗಿನ ಜುಟ್ಟು!: ಭಾರಿ ವಂಚನೆ ಬಹಿರಂಗ

ಹೋಟೆಲ್‌ ಮಾಲೀಕರು-ಕಾರ್ಮಿಕರ ಪ್ರತಿಭಾವಂತ ಮಕ್ಕಳಿಗೆ ಸನ್ಮಾನ. ಬಿಎಚ್‌ಎ ಪದಾಧಿಕಾರಿಗಳ ಜೊತೆ ಸಮೂಹ ಫೋಟೋ.

ಇದೂ ಓದಿ: ಹತ್ತು ಲಕ್ಷ ರೂ. ಮೌಲ್ಯದ ಚಿನ್ನದ ಸರ ಗ್ರಾಹಕರಿಗೆ ಮರಳಿಸಿ ಪ್ರಾಮಾಣಿಕತೆ ಮೆರೆದ ಹೋಟೆಲ್‌ ಕಾರ್ಮಿಕ

ಹಾಲಿನ ದರ ಮಾತ್ರವಲ್ಲದೆ, ಇತರ ಹಲವು ಸಾಮಗ್ರಿಗಳ ಬೆಲೆಯೂ ಏರಿಕೆಯಾಗಿದೆ. ಹೀಗಾಗಿ ತಿಂಡಿ-ತಿನಿಸುಗಳ ಬೆಲೆ ಏರಿಕೆ ಅನಿವಾರ್ಯವಾದರೂ ಹೋಟೆಲೋದ್ಯಮಿಗಳು ಗ್ರಾಹಕರಿಗೆ ಹೊರೆ ಆದೀತು ಎಂದು ಯೋಚಿಸಿ ಬೆಲೆ ಏರಿಕೆ ಮಾಡಲು ಹಿಂಜರಿಯುತ್ತಿದ್ದಾರೆ. ಹಾಗಂತ ಗ್ರಾಹಕರಿಗೆ ಹೊರೆ ಆಗುವುದನ್ನು ತಪ್ಪಿಸಲು ಹೋದರೆ ಹೋಟೆಲೋದ್ಯಮಿಗಳಿಗೇ ಹೊರೆಯಾಗುತ್ತದೆ ಎಂದು ಪರಿಸ್ಥಿತಿ ಸಂಕೀರ್ಣತೆಯ ಬಗ್ಗೆ ಬೆಂಗಳೂರು ಹೋಟೆಲುಗಳ ಸಂಘದ ಅಧ್ಯಕ್ಷ ಎಚ್‌.ಎಸ್.‌ ಸುಬ್ರಹ್ಮಣ್ಯ ಹೊಳ್ಳ ಅವರು ವಿವರಿಸಿದರು.

ಕರ್ನಾಟಕ ರಾಜ್ಯ ಹೋಟೆಲ್ ಮಾಲೀಕರ ಸಂಘದ ಅಧ್ಯಕ್ಷ ಮಧುಕರ್‌ ಶೆಟ್ಟಿ, ಬೆಂಗಳೂರು ಹೋಟೆಲುಗಳ ಸಂಘದ ಉಪಾಧ್ಯಕ್ಷರಾದ ಶಂಕರ್‌ ಎ. ಕುಂದರ್‌, ಶಕೀರ್‌ ಹಕ್‌, ಖಜಾಂಚಿ ಜಿ. ಸುಧಾಕರ್‌ ಶೆಟ್ಟಿ, ಜಂಟಿ ಕಾರ್ಯದರ್ಶಿಗಳಾದ ಬಿ.ಎಂ.ಧನಂಜಯ, ಎ.ಎಲ್.ರಾಕೇಶ್‌, ಎಸ್.ಪಿ.ಕೃಷ್ಣರಾಜ್‌, ಶೇಖರ್‌ ನಾಯ್ಡು ಸಭೆಯಲ್ಲಿ ಉಪಸ್ಥಿತರಿದ್ದರು.

ಬೆಂಗಳೂರು ಹೋಟೆಲುಗಳ ಸಂಘದ ಸಮಾರಂಭದಲ್ಲಿ ಭಾಗಿಯಾದ ಸದಸ್ಯರು-ಗಣ್ಯರು

ಇದೂ ಓದಿ: ಬೆಂಗಳೂರು ಹೋಟೆಲುಗಳ ಸಂಘದ ಸದಸ್ಯತ್ವ ಪಡೆಯುವುದು ಹೇಗೆ? ಅದಕ್ಕೆಂದೇ ಮಾಡಲಾಗಿದೆ ಹೊಸ ಸಮಿತಿ

ಇದೂ ಓದಿ: ಈ ತಿಂಗಳಾಂತ್ಯದಲ್ಲೇ ಫುಡ್ ಡೆಲಿವರಿ ಕ್ಷೇತ್ರಕ್ಕೆ ಫ್ಲಿಪ್‌ಕಾರ್ಟ್ ಲಗ್ಗೆ?: ಜೊಮ್ಯಾಟೊ-ಸ್ವಿಗ್ಗಿಗೆ ಸವಾಲು..

ಇದೂ ಓದಿ: ದಿಗ್ಗಜ ಹೋಟೆಲಿಗರಿಗೂ ತಿಳಿಯಲಾಗಲಿಲ್ಲ ಇದೊಂದು ರಹಸ್ಯ!; ಕೆಲವು ಹೋಟೆಲ್‌ಗಳಲ್ಲಿದೆಯಾ ‘ಸ್ಥಳ ಮಹಿಮೆʼ?

ಸೋಷಿಯಲ್‌ ಮೀಡಿಯಾದಲ್ಲಿ ಹಂಚಿಕೊಳ್ಳಿ