ಒಳಗೇನಿದೆ!?

ಬೆಂಗಳೂರು ಹೋಟೆಲುಗಳ ಸಂಘದಿಂದ ಜಿ.ಮಂಜುನಾಥ್ ಅವರಿಗೆ ʼಉದ್ಯಮ ಚೇತನʼ ಪ್ರಶಸ್ತಿ

ಹೋಟೆಲ್‌ ಕನ್ನಡ, ಬೆಂಗಳೂರು: ಬೆಂಗಳೂರು ಹೋಟೆಲುಗಳ ಸಂಘವು ಹೋಟೆಲ್ ಉದ್ಯಮದಲ್ಲಿ ವಿಶೇಷ ಸೇವೆ ಸಲ್ಲಿಸಿರುವ ಹಿರಿಯ ಸದಸ್ಯರಿಗೆ ನೀಡುವ ʼಉದ್ಯಮ ಚೇತನʼ ಪ್ರಶಸ್ತಿಗೆ ಹಿರಿಯ ಹೋಟೆಲೋದ್ಯಮಿ ಜಿ.ಮಂಜುನಾಥ್ ಅವರು ಭಾಜನರಾಗಿದ್ದಾರೆ.

ರಾಜಧಾನಿ ಬೆಂಗಳೂರಿನ ಕೆ.ಜಿ.ರಸ್ತೆಯ ʼಬೆಂಗಳೂರು ಗೇಟ್ʼ ಹೋಟೆಲ್‌ನಲ್ಲಿ ನ.13ರಂದು ನಡೆದ ಬೆಂಗಳೂರು ಹೋಟೆಲುಗಳ ಸಂಘದ 91ನೇ ವಾರ್ಷಿಕ ಸರ್ವಸದಸ್ಯರ ಸಭೆಯ ಸಂದರ್ಭದಲ್ಲಿ ಬೆಂಗಳೂರು ನಗರದ ಮಾಜಿ ಪೊಲೀಸ್ ಆಯುಕ್ತರಾದ ಭಾಸ್ಕರ್ ರಾವ್ ಅವರು ಜಿ.ಮಂಜುನಾಥ್ ಅವರಿಗೆ ʼಉದ್ಯಮ ಚೇತನʼ ಪ್ರಶಸ್ತಿ ಪ್ರದಾನ ಮಾಡಿದರು.

ಇದೂ ಓದಿ: ʼಹಳ್ಳಿಮನೆʼ ಸಂಜೀವ ರಾವ್‌ ಅವರಿಗೆ ʼಬಿಎಚ್‌ಎ ಜೀವಮಾನದ ಸಾಧನೆ ಪ್ರಶಸ್ತಿʼ

ಉಡುಪಿ ಜಿಲ್ಲೆಯ ಕುಂದಾಪುರ ತಾಲೂಕಿನ ಗಂಗೊಳ್ಳಿಯವರಾದ ಜಿ.ಮಂಜುನಾಥ್ ಅವರು ಬೆಂಗಳೂರಿನ ಅಕ್ಕಿಪೇಟೆಯಲ್ಲಿನ ʼಶ್ರೀ ವಿಷ್ಣು ದರ್ಶನ್ʼ ಹೋಟೆಲ್ ಮಾಲೀಕರಾಗಿದ್ದು, ಹೋಟೆಲೋದ್ಯಮದಲ್ಲಿ ಕಳೆದ 45ಕ್ಕೂ ಅಧಿಕ ವರ್ಷಗಳ ಅವರ ಯಶಸ್ವಿ ವೃತ್ತಿಜೀವನವನ್ನು ಪರಿಗಣಿಸಿ ಬೆಂಗಳೂರು ಹೋಟೆಲುಗಳ ಸಂಘ ಅವರನ್ನು ಈ ಪ್ರಶಸ್ತಿಗೆ ಪರಿಗಣಿಸಿದೆ.

ಇದೂ ಓದಿ: ‘ದರ್ಶಿನಿ ಬ್ರಹ್ಮ’ ಆರ್. ಪ್ರಭಾಕರ್‌ ಅವರಿಗೆ ‘ಅಸಾಮಾನ್ಯ ಕನ್ನಡಿಗ’ ಪುರಸ್ಕಾರ

ಜಿ.ಮಂಜುನಾಥ್‌ ಅವರಿಗೆ ಉದ್ಯಮ ಚೇತನ ಪ್ರಶಸ್ತಿ ಪ್ರದಾನ

ಇದೂ ಓದಿ: ಹೋಟೆಲೋದ್ಯಮಿಯ ನೇತೃತ್ವದಲ್ಲಿ ಬೃಹತ್‌ ದೇವತಾ ಕಾರ್ಯ, ನೀಲನಕ್ಷೆ ಅನಾವರಣ

ಬೆಂಗಳೂರಿನಲ್ಲಿನ ಶ್ರೀವೇಣುಗೋಪಾಲಕೃಷ್ಣ ಕ್ರೆಡಿಟ್ ಕೋ-ಆಪರೇಟಿವ್ ಸೊಸೈಟಿಯ ನಿರ್ದೇಶಕರು ಹಾಗೂ ಶ್ರೀ ಸೋಮಕ್ಷತ್ರಿಯ ಗಾಣಿಗ ಸಮಾಜದ ಸಕ್ರಿಯ ಸದಸ್ಯರೂ ಆಗಿರುವ ಜಿ.ಮಂಜುನಾಥ್ ಅವರಿಗೆ ʼಉದ್ಯಮ ಚೇತನʼ ಪ್ರಶಸ್ತಿ ನೀಡಿ ಗೌರವಿಸಲಾಗಿದೆ. ಈ ವೇಳೆ ಅವರ ಪತ್ನಿ ಶಾರದಾ ಅವರನ್ನೂ ಸನ್ಮಾನಿಸಲಾಯಿತು.

ಇದೂ ಓದಿ: 12 ಸಿಬ್ಬಂದಿಗೆ ಕಾರು, 25 ಮಂದಿಗೆ ದ್ವಿಚಕ್ರ ವಾಹನ ಉಡುಗೊರೆ ನೀಡಿದ ಹೋಟೆಲೋದ್ಯಮಿ!

ಬೆಂಗಳೂರು ಹೋಟೆಲುಗಳ ಸಂಘದ ಗೌರವಾಧ್ಯಕ್ಷ ಪಿ.ಸಿ.ರಾವ್, ಅಧ್ಯಕ್ಷ ಎಚ್.ಎಸ್.ಸುಬ್ರಹ್ಮಣ್ಯ ಹೊಳ್ಳ, ಗೌರವ ಕಾರ್ಯದರ್ಶಿ ವೀರೇಂದ್ರ ಎನ್. ಕಾಮತ್, ಉಪಾಧ್ಯಕ್ಷ ಶಂಕರ್ ಎ. ಕುಂದರ್, ಜಂಟಿ ಕಾರ್ಯದರ್ಶಿ ಬಿ.ಎಂ.ಧನಂಜಯ ಮತ್ತು ಕರ್ನಾಟಕ ರಾಜ್ಯ ಹೋಟೆಲ್ ಮಾಲೀಕರ ಸಂಘದ ಅಧ್ಯಕ್ಷ ಮಧುಕರ್ ಶೆಟ್ಟಿ ಹಾಗೂ ಹೋಟೆಲೋದ್ಯಮದ ಅನೇಕ ಗಣ್ಯರು ಈ ಸಂದರ್ಭದಲ್ಲಿ ಉಪಸ್ಥಿತರಿದ್ದರು.

ಇದೂ ಓದಿ: ಹೋಟೆಲ್‌ ಕನ್ನಡ: ಇದು ಕನ್ನಡಿಗ, ಕರ್ನಾಟಕದ ಹೋಟೆಲಿಗರ ಸುದ್ದಿದರ್ಶಿನಿ

ಇದೂ ಓದಿ: ಕರ್ನಾಟಕದ ಹೋಟೆಲೋದ್ಯಮ ಭಾರತಕ್ಕೆ ಮಾದರಿ: ಮಾಜಿ ಪೊಲೀಸ್‌ ಆಯುಕ್ತ ಭಾಸ್ಕರ್‌ ರಾವ್‌

ಇದೂ ಓದಿ: ಇನ್ಮುಂದೆ ಪಿಎಫ್ ಹಣ ಪೂರ್ತಿ ಹಿಂಪಡೆಯಲು ಅವಕಾಶ: ಕಾರಣ ತಿಳಿಸದಿದ್ದರೂ ಲಭ್ಯ..

ಸೋಷಿಯಲ್‌ ಮೀಡಿಯಾದಲ್ಲಿ ಹಂಚಿಕೊಳ್ಳಿ