ಒಳಗೇನಿದೆ!?

ಕೇಂದ್ರ ಹಣಕಾಸು ಸಚಿವರನ್ನು ಭೇಟಿಯಾದ ದಕ್ಷಿಣ ರಾಜ್ಯಗಳ ಹೋಟೆಲ್‌ ಉದ್ಯಮಿಗಳು

ಹೋಟೆಲ್‌ ಕನ್ನಡ, ಬೆಂಗಳೂರು: ದಕ್ಷಿಣ ಭಾರತದ ಕರ್ನಾಟಕ, ಕೇರಳಂ ಹಾಗೂ ತಮಿಳುನಾಡು ರಾಜ್ಯಗಳ ಹೋಟೆಲ್‌ ಉದ್ಯಮಿಗಳು ಕೇಂದ್ರ ವಿತ್ತ ಸಚಿವೆ ನಿರ್ಮಲಾ ಸೀತಾರಾಮನ್‌ ಅವರನ್ನು ಭೇಟಿಯಾಗಿದ್ದಾರೆ.

ಚೆನ್ನೈನಲ್ಲಿ ಆಗಸ್ಟ್‌ 1ರ ಶನಿವಾರ ಈ ಭೇಟಿ ನಡೆಯಿತು. ಬೆಂಗಳೂರು ಹೋಟೆಲುಗಳ ಸಂಘದ ಗೌರವಾಧ್ಯಕ್ಷ ಪಿ.ಸಿ.ರಾವ್‌ ಮಾತ್ರವಲ್ಲದೆ ತಮಿಳುನಾಡು, ಕೇರಳಂ ರಾಜ್ಯಗಳ ಹೋಟೆಲ್‌ ಉದ್ಯಮದ ಗಣ್ಯರೂ ಈ ಭೇಟಿ ವೇಳೆ ಉಪಸ್ಥಿತರಿದ್ದರು.

ಜಿಎಸ್‌ಟಿಗೆ ಸಂಬಂಧಿಸಿದಂತೆ ಆತಿಥ್ಯ ಕ್ಷೇತ್ರದ ಬಹುಕಾಲದ ಬೇಡಿಕೆಗಳಿಗೆ ಸಂಬಂಧಿಸಿದಂತೆ ವಿತ್ತ ಸಚಿವೆ ನಿರ್ಮಲಾ ಸೀತಾರಾಮನ್‌ ಅವರಿಗೆ ಬಿಎಚ್‌ಎ ಗೌರವಾಧ್ಯಕ್ಷ ಪಿ.ಸಿ.ರಾವ್‌ ಅವರು ಮನವಿ ಪತ್ರ ಸಲ್ಲಿಸಿದರು.

ಇದೂ ಓದಿ: ಹೋಟೆಲ್-ಪ್ರವಾಸೋದ್ಯಮ ಕ್ಷೇತ್ರದ ಗಣ್ಯರ ಜೊತೆ ಚರ್ಚಿಸಿದ ಸಿಎಂ; ಇಲ್ಲಿದೆ ಸಂಪೂರ್ಣ ವಿವರ..

ಮುಖ್ಯವಾಗಿ ಬೇಕರಿ ಹಾಗೂ ಸ್ವೀಟ್ ಉದ್ಯಮಕ್ಕೆ ಶೇ.5 ಜಿಎಸ್‌ಟಿ ದರದೊಂದಿಗೆ  ನೀಡಿರುವ ಇನ್‌ಪುಟ್ ಸೌಲಭ್ಯವನ್ನು ರೆಸ್ಟೋರೆಂಟ್  ಮತ್ತು ಹೊಟೇಲ್ ಕೊಠಡಿಗಳಿಗೂ ವಿಸ್ತರಿಸಬೇಕೆಂದು ಈ ಸಭೆಯಲ್ಲಿ ಕೋರಲಾಗಿದೆ.  ನಮ್ಮ ಮನವಿಗೆ ಸಚಿವರು  ಸಕಾರಾತ್ಮಕವಾಗಿ ಸ್ಪಂದಿಸಿದ್ದು, ಈ ವಿಷಯವನ್ನು ಮುಂಬರುವ ಜಿಎಸ್‌ಟಿ ಕೌನ್ಸಿಲ್ ಸಭೆಯಲ್ಲಿ ಚರ್ಚಿಸಿ ಸೂಕ್ತ ತೀರ್ಮಾನ ಕೈಗೊಳ್ಳುವ ಭರವಸೆ ನೀಡಿದ್ದಾರೆ ಎಂಬುದಾಗಿ ಪಿ.ಸಿ.ರಾವ್‌ ತಿಳಿಸಿದ್ದಾರೆ.

ವಿತ್ತ ಸಚಿವರನ್ನು ಭೇಟಿಯಾದ ದಕ್ಷಿಣ ರಾಜ್ಯಗಳ ಹೋಟೆಲ್‌ ಉದ್ಯಮದ ಗಣ್ಯರು.

ಇದೂ ಓದಿ: ʼಬರೀ ಬನ್ ಕೊಡಿ, ಕ್ರೀಮ್-ಜಾಮ್ ನಾವೇ ಹಾಕಿಕೊಳ್ಳುತ್ತೇವೆʼ: ವಿತ್ತ ಸಚಿವರಿಗೆ ಹೋಟೆಲ್ ಮಾಲೀಕರ ಅಹವಾಲು!

ಈ ಮಹತ್ವದ ಬೇಡಿಕೆ ಈಡೇರುವ ನಿಟ್ಟಿನಲ್ಲಿ ಮುಂದಿನ ದಿನಗಳಲ್ಲಿ ಎಲ್ಲ ರಾಜ್ಯಗಳ ಹೋಟೆಲ್‌ ಸಂಘಗಳು ಒಗ್ಗಟ್ಟಿನಿಂದ ಇನ್ನಷ್ಟು ಪ್ರಯತ್ನಗಳನ್ನು ಮುಂದುವರಿಸುವ ಅಗತ್ಯವಿದೆ ಎಂದು ಪಿ.ಸಿ.ರಾವ್‌ ಅಭಿಪ್ರಾಯ ಪಟ್ಟಿದ್ದಾರೆ.

ಸ್ವಿಗ್ಗಿ-ಜೊಮ್ಯಾಟೊಗೆ ನಿರ್ದೇಶನ ನೀಡಲು ಮನವಿ

ಆನ್‌ಲೈನ್ ಆಹಾರ ವಿತರಣಾ ವೇದಿಕೆಗಳಾದ ಸ್ವಿಗ್ಗಿ ಮತ್ತು ಜೊಮ್ಯಾಟೊ ಗಳು ರೆಸ್ಟೋರೆಂಟ್ ಬಿಲ್‌ಗಳ ಜಿಎಸ್‌ಟಿ ಮೊತ್ತದ ಮೇಲೂ ಸೇವಾ ಶುಲ್ಕ ವಿಧಿಸುತ್ತಿರುವುದನ್ನು ಆಕ್ಷೇಪಿಸಿ ಜಿಎಸ್‌ಟಿ ಮಂಡಳಿ ಅಧ್ಯಕ್ಷೆಯೂ ಆಗಿರುವ ಸಚಿವೆ ನಿರ್ಮಲಾ ಸೀತಾರಾಮನ್ ಅವರಿಗೆ ಬೆಂಗಳೂರು ಹೋಟೆಲುಗಳ ಸಂಘ ಮನವಿ ಸಲ್ಲಿಸಿದೆ.

ಸಚಿವೆ ನಿರ್ಮಲಾ ಸೀತಾರಾಮನ್‌ಗೆ ಬಿಎಚ್‌ಎ ಗೌರವಾಧ್ಯಕ್ಷ ಪಿ.ಸಿ.ರಾವ್‌ ಅವರಿಂದ ಮನವಿ ಸಲ್ಲಿಕೆ.

ಇದೂ ಓದಿ: ವಿತ್ತ ಸಚಿವೆ ಜೊತೆ ಹೋಟೆಲೋದ್ಯಮಿಗಳ ಸಂವಾದ; ಗಮನ ಸೆಳೆದ ಸಂಗತಿ ಇದು…

ಬೆಂಗಳೂರು ಹೋಟೆಲುಗಳ ಸಂಘದ ಗೌರವಾಧ್ಯಕ್ಷ ಪಿ.ಸಿ. ರಾವ್, ಅಧ್ಯಕ್ಷ ಎಚ್‌.ಎಸ್. ಸುಬ್ರಹ್ಮಣ್ಯ ಹೊಳ್ಳ ಹಾಗೂ ಗೌರವ ಕಾರ್ಯದರ್ಶಿ ವೀರೇಂದ್ರ ಎನ್. ಕಾಮತ್ ಅವರ ಸಹಿ ಇರುವ ಈ ಮನವಿ ಪತ್ರವನ್ನು ವಿತ್ತ ಸಚಿವರಿಗೆ ಸಲ್ಲಿಸಲಾಗಿದೆ.

ಇದೂ ಓದಿ: ವಿತ್ತ ಸಚಿವೆ ನಿರ್ಮಲಾ ಸೀತಾರಾಮನ್‌ಗೆ ಕರ್ನಾಟಕ ರಾಜ್ಯ ಹೋಟೆಲುಗಳ ಸಂಘದ ಮನವಿ

ಮನವಿಯಲ್ಲಿನ ಪ್ರಮುಖ ಅಂಶಗಳು

ಆರ್ಥಿಕ ಹೊರೆ: ಜಿಎಸ್‌ಟಿ ಸರ್ಕಾರದ ಪರವಾಗಿ ಸಂಗ್ರಹಿಸುವ ಶಾಸನಬದ್ಧ ತೆರಿಗೆಯಾಗಿದ್ದು, ಇದು ರೆಸ್ಟೋರೆಂಟ್‌ನ ಆದಾಯದ ಭಾಗವಲ್ಲ. ಸ್ವಿಗ್ಗಿ-ಜೊಮ್ಯಾಟೊ ಈ ಜಿಎಸ್‌ಟಿ ಮೊತ್ತದ ಮೇಲೂ ಸೇವಾ ಶುಲ್ಕ ವಿಧಿಸುತ್ತಿರುವುದು ಹೋಟೆಲ್ ಮಾಲೀಕರ ಮೇಲೆ ಅನಗತ್ಯ ಆರ್ಥಿಕ ಹೊರೆ ಉಂಟುಮಾಡುತ್ತಿದೆ.

ಇದೂ ಓದಿ: ಬೆಂಗಳೂರು ಹೋಟೆಲುಗಳ ಸಂಘದವರಿಂದ ಆರ್​ಬಿಐ ಅಧಿಕಾರಿ ಜೊತೆ ಮಾತುಕತೆ; ಸಮಸ್ಯೆಯೊಂದು ಶೀಘ್ರದಲ್ಲೇ ಪರಿಹಾರ

ಲೆಕ್ಕಾಚಾರದಲ್ಲಿ ಪಾರದರ್ಶಕತೆ: ಆಹಾರ ಮತ್ತು ಸೇವೆಗಳ ತೆರಿಗೆಯೋಗ್ಯ ಮೌಲ್ಯದ ಮೇಲೆ ಮಾತ್ರ (ಜಿಎಸ್‌ಟಿ ಮೊತ್ತವನ್ನು ಹೊರತುಪಡಿಸಿ) ಸೇವಾ ಶುಲ್ಕ ಲೆಕ್ಕ ಹಾಕುವಂತೆ ಆನ್‌ಲೈನ್ ಆಹಾರ ವಿತರಣಾ ಸಂಸ್ಥೆಗಳಿಗೆ ಸೂಕ್ತ ನಿರ್ದೇಶನಗಳನ್ನು ನೀಡುವಂತೆ ಸರ್ಕಾರಕ್ಕೆ ಒತ್ತಾಯ.

ಇದೂ ಓದಿ: ಹೋಟೆಲ್‌ಗಳಲ್ಲಿ ನೀವು ಸೇವಿಸುವ ಪನೀರ್‌ ಕೃತಕವೇ?; ಏನಿದು ಕೇಂದ್ರ ಸರ್ಕಾರದ ಹೊಸ ಮಾರ್ಗಸೂಚಿ?

ನ್ಯಾಯಯುತ ಪದ್ಧತಿಗಾಗಿ ಆಗ್ರಹ: ಸರ್ಕಾರದ ಜಿಎಸ್‌ಟಿ ನಿಯಮಗಳಿಗೆ ಅನುಗುಣವಾಗಿ ನ್ಯಾಯಯುತ ವ್ಯಾಪಾರ ಖಚಿತಪಡಿಸಲು ಮತ್ತು ಆತಿಥ್ಯ ಉದ್ಯಮಕ್ಕೆ ಅಗತ್ಯ ಇರುವ ಪರಿಹಾರ ಒದಗಿಸಲು ಈ ವಿಚಾರದಲ್ಲಿ ಹಣಕಾಸು ಸಚಿವರು ತಕ್ಷಣವೇ ಮಧ್ಯಪ್ರವೇಶಿಸಬೇಕು ಎಂಬ ಮನವಿ.

ಇದೂ ಓದಿ: ಬೆಂಗಳೂರು ಹೋಟೆಲುಗಳ ಸಂಘದ ಸದಸ್ಯತ್ವ ಪಡೆಯುವುದು ಹೇಗೆ? ಅದಕ್ಕೆಂದೇ ಮಾಡಲಾಗಿದೆ ಹೊಸ ಸಮಿತಿ

ಇದೂ ಓದಿ: ಕೇಂದ್ರ ಬಜೆಟ್‌: ಫೆಡರೇಷನ್‌ ಆಫ್‌ ಹೋಟೆಲ್‌‌ & ರೆಸ್ಟೋರೆಂಟ್ ಅಸೋಸಿಯೇಷನ್ಸ್‌ ಆಫ್‌ ಇಂಡಿಯಾ ಪ್ರತಿಕ್ರಿಯೆ ಏನು?

ಇದೂ ಓದಿ: ಹೋಟೆಲಿಗರಿಗೆ ಸಮಸ್ಯೆ ಆದಾಗ ನಾವಿದ್ದೇವೆ: ಬಿಎಚ್‌ಎ ನೂತನ ಅಧ್ಯಕ್ಷ ಎಚ್‌.ಎಸ್. ಸುಬ್ರಹ್ಮಣ್ಯ ಹೊಳ್ಳ

ಸೋಷಿಯಲ್‌ ಮೀಡಿಯಾದಲ್ಲಿ ಹಂಚಿಕೊಳ್ಳಿ