ಒಳಗೇನಿದೆ!?

24 ಹೋಟೆಲ್, 2 ರೆಸ್ಟೋರೆಂಟ್‌ಗಳ ಮೇಲ್ದರ್ಜೆಗೆಗಾಗಿ ಕೆಎಸ್‌ಟಿಡಿಸಿಯಿಂದ 100 ಕೋಟಿ ರೂ. ಹೂಡಿಕೆ

ಹೋಟೆಲ್‌ ಕನ್ನಡ, ಬೆಂಗಳೂರು: ರಾಜ್ಯದ ಪ್ರಮುಖ ಪ್ರವಾಸಿ ತಾಣಗಳಲ್ಲಿರುವ ಕರ್ನಾಟಕ ರಾಜ್ಯ ಪ್ರವಾಸೋದ್ಯಮ ಅಭಿವೃದ್ಧಿ ನಿಗಮ(ಕೆಎಸ್‌ಟಿಡಿಸಿ)ದ 24 ಹೋಟೆಲ್‌ಗಳು ಮತ್ತು ಎರಡು ರೆಸ್ಟೋರೆಂಟ್‌ಗಳನ್ನು ಸಮಗ್ರವಾಗಿ ಮೇಲ್ದರ್ಜೆಗೆ ಏರಿಸಲು 100 ಕೋಟಿ ರೂಪಾಯಿ ಹೂಡಿಕೆ ಮಾಡಲಾಗುವುದು ಎಂದು ಪ್ರವಾಸೋದ್ಯಮ ಸಚಿವ ಕೆ.ಜೆ. ಜಾರ್ಜ್ ಸೋಮವಾರ ತಿಳಿಸಿದ್ದಾರೆ.

ಈ ನವೀಕರಣ ಯೋಜನೆಯು ಕೊಠಡಿಗಳು, ಶೌಚಾಲಯಗಳು, ಆಹಾರದ ಗುಣಮಟ್ಟ, ನೈರ್ಮಲ್ಯ, ಹೌಸ್‌ಕೀಪಿಂಗ್ ಹಾಗೂ ಅತಿಥಿ ಸತ್ಕಾರದ ಸೌಲಭ್ಯಗಳನ್ನು ಸುಧಾರಿಸುವುದರ ಮೇಲೆ ಗಮನ ಹರಿಸಲಿದೆ. ಹಂತ-ಹಂತವಾಗಿ ಕೆಲವು ಹೋಟೆಲ್‌ಗಳನ್ನು 3-ಸ್ಟಾರ್ ಹಾಗೂ ಅದಕ್ಕಿಂತ ಹೆಚ್ಚಿನ ಸೇವಾ ಮಟ್ಟಕ್ಕೆ ಏರಿಸಲಾಗುವುದು ಎಂದು ಅವರು ಹೇಳಿದರು.

ಇದೂ ಓದಿ: ಮತ್ತದೇ ಬೇಸರ.. ಮನಸು ಗಾಂಧಿಬಜಾರು.. ಮರಳೀತೇ ನಿತ್ಯೋತ್ಸವ?

ಕೆಎಸ್‌ಟಿಡಿಸಿಯ ‘ಮಯೂರ’ ಹೋಟೆಲ್‌ಗಳಿಗಿರುವ ಅತ್ಯುತ್ತಮ ತಾಣಗಳ ಲಾಭ ಬಳಸಿಕೊಂಡು, ಪ್ರವಾಸಿಗರ ತೃಪ್ತಿ, ಕೊಠಡಿಗಳ ಕಾಯ್ದಿರಿಸುವಿಕೆ ಮತ್ತು ಆದಾಯ ಹೆಚ್ಚಿಸುವುದು ಈ ಯೋಜನೆಯ ಮುಖ್ಯ ಉದ್ದೇಶವಾಗಿದೆ.

“ಮಯೂರ ಹೋಟೆಲ್‌ಗಳ ಅತಿದೊಡ್ಡ ಶಕ್ತಿ ಎಂದರೆ ಅವುಗಳಿರುವ ಪ್ರಕೃತಿ ಸೌಂದರ್ಯದ ತಾಣಗಳು. ರಾಜ್ಯದ ಅತ್ಯುತ್ತಮ ಪ್ರವಾಸಿ ಸ್ಥಳಗಳಲ್ಲಿ ನಮ್ಮ ಹೋಟೆಲ್‌ಗಳಿವೆ. ಈಗ ಈ ಪ್ರಮುಖ ಅನುಕೂಲಕ್ಕೆ ತಕ್ಕಂತೆ ಉತ್ತಮ ಕೊಠಡಿಗಳು, ಗುಣಮಟ್ಟದ ಆಹಾರ ಮತ್ತು ವೃತ್ತಿಪರ ಅತಿಥಿ ಸತ್ಕಾರ ಒದಗಿಸಬೇಕಿದೆ” ಎಂದು ಸಚಿವರು ತಿಳಿಸಿದರು.

ಇದೂ ಓದಿ: ಪ್ರವಾಸೋದ್ಯಮ ಸೇವೆಗಳನ್ನು ಒಂದೇ ವೇದಿಕೆಯಡಿ ತರಲು ‘ಡಿಜಿಟಲ್ ಸ್ಟ್ಯಾಕ್’ ಯೋಜನೆ

ಈ 100 ಕೋಟಿ ರೂ. ಹೂಡಿಕೆ ಹಂತ-ಹಂತವಾಗಿ ಅನುಷ್ಠಾನಗೊಳಿಸಲಾಗುವುದು. ಇದರಿಂದ ಕೆಎಸ್‌ಟಿಡಿಸಿ ಹೋಟೆಲ್‌‌ಗಳು ವಾಣಿಜ್ಯಿಕವಾಗಿ ಮತ್ತಷ್ಟು ಬಲಗೊಳ್ಳಲಿವೆ. ಹಂಪಿ, ಜೋಗ್‌ಫಾಲ್ಸ್, ನಂದಿ ಬೆಟ್ಟ, ಮಡಿಕೇರಿ ಮತ್ತು ಕೆಆರ್‌ಎಸ್‌ನಂತಹ ಪ್ರಮುಖ ಪ್ರವಾಸಿ ತಾಣಗಳಲ್ಲಿರುವ ಹೋಟೆಲ್‌ಗಳು ಈ ಯೋಜನೆಯಲ್ಲಿ ಸೇರಿವೆ.

ಇದೂ ಓದಿ: ಹೋಟೆಲಿಗರು, ಫಾರ್ಮಸಿಯವರಿಗೆ ಆರೋಗ್ಯ ಸಚಿವರಿಂದ ಮತ್ತೆ ತಾಕೀತು..

ಕೊಠಡಿಗಳು, ಶೌಚಾಲಯಗಳು, ರೆಸ್ಟೋರೆಂಟ್‌ಗಳು, ಅಡುಗೆಮನೆ, ಸ್ವಾಗತ ಕೊಠಡಿಗಳು, ಪೀಠೋಪಕರಣಗಳು, ದೀಪಾಲಂಕಾರ ಮತ್ತು ಲ್ಯಾಂಡ್‌ಸ್ಕೇಪಿಂಗ್‌ಗಳನ್ನು ಆಧುನಿಕಗೊಳಿಸಲಾಗುವುದು. ಇದರೊಂದಿಗೆ ಆನ್‌ಲೈನ್ ಬುಕಿಂಗ್ ವ್ಯವಸ್ಥೆ ಮತ್ತು ಪ್ರವಾಸಿಗರ ಅಭಿಪ್ರಾಯ ಸಂಗ್ರಹಣಾ ವ್ಯವಸ್ಥೆ ಬಲಪಡಿಸಲಾಗುವುದು ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ಇದೂ ಓದಿ: ಪ್ರವಾಸಿ ತಾಣಗಳಲ್ಲಿ ಸದ್ಯದಲ್ಲೇ ಕೆಎಸ್‌ಟಿಡಿಸಿಯ ‘ಮಯೂರ ರುಚಿ ಆನ್ ವೀಲ್ಸ್’ ಆರಂಭ

ಸರ್ಕಾರಿ ಹೋಟೆಲ್ ಎಂಬ ಕಾರಣಕ್ಕೆ ಪ್ರವಾಸಿಗರು ಸೌಲಭ್ಯಗಳಲ್ಲಿ ರಾಜಿ ಮಾಡಿಕೊಳ್ಳಬಾರದು. ಸೌಲಭ್ಯ-ಸೇವೆಯಲ್ಲಿ ಮಯೂರ ಹೋಟೆಲ್‌ಗಳು ಉನ್ನತ ಮಟ್ಟದ ಗುಣಮಟ್ಟ ಕಾಯ್ದುಕೊಳ್ಳಬೇಕು.
| ಕೆ.ಜೆ. ಜಾರ್ಜ್‌, ಪ್ರವಾಸೋದ್ಯಮ ಸಚಿವ

ಉತ್ತಮ ಮೂಲಸೌಕರ್ಯ ಹಾಗೂ ಆಕರ್ಷಕ ಸೇವೆಯಿಂದ ಹೆಚ್ಚಿನ ಪ್ರವಾಸಿಗರನ್ನು ಆಕರ್ಷಿಸಲು ಸಾಧ್ಯ ಎಂದು ಕೆಎಸ್‌ಟಿಡಿಸಿ ಅಧ್ಯಕ್ಷ ಎಂ.ಶ್ರೀನಿವಾಸ್ ಹೇಳಿದರು.

ಇದೂ ಓದಿ: ಹೋಟೆಲ್-ಪ್ರವಾಸೋದ್ಯಮ ಕ್ಷೇತ್ರದ ಗಣ್ಯರ ಜೊತೆ ಚರ್ಚಿಸಿದ ಸಿಎಂ; ಇಲ್ಲಿದೆ ಸಂಪೂರ್ಣ ವಿವರ..

“ಇದು ಕೇವಲ ನವೀಕರಣವಲ್ಲ, ಪ್ರತಿ ಹೋಟೆಲ್‌ನ ಬೇಡಿಕೆ ಮತ್ತು ಆದಾಯದ ಸಾಮರ್ಥ್ಯ ಆಧರಿಸಿ ಸಮಗ್ರ ಅಭಿವೃದ್ಧಿಪಡಿಸಲಾಗುವುದು” ಎಂದು ಪ್ರವಾಸೋದ್ಯಮ ಕಾರ್ಯದರ್ಶಿ ರಾಮ್‌ಪ್ರಸಾದ್ ಮನೋಹರ್ ತಿಳಿಸಿದರು.

ಇದೂ ಓದಿ: ಕರ್ನಾಟಕ ರಾಜ್ಯ ಹೋಟೆಲುಗಳ ಸಂಘದ ನೂತನ ಅಧ್ಯಕ್ಷರಾಗಿ ಮಧುಕರ್‌ ಶೆಟ್ಟಿ ಆಯ್ಕೆ

ಇದೂ ಓದಿ: ಬಂಟರ ಸಂಘದ ನೂತನ ಅಧ್ಯಕ್ಷರಾಗಿ ಡಾ.ದೀಪಕ್‌ ಶೆಟ್ಟಿ, ಉಪಾಧ್ಯಕ್ಷರಾಗಿ ಉದ್ಯಮಿ ಮಧುಕರ್‌ ಶೆಟ್ಟಿ ಆಯ್ಕೆ

ಇದೂ ಓದಿ: ಆಹಾರದಲ್ಲಿ ಕೂದಲು: ಪ್ರಶ್ನಿಸಿದ ಕನ್ನಡಿಗರ ಮೇಲೆ ಒಡಿಶಾದ ಪುರಿ ಹೋಟೆಲ್‌ನಲ್ಲಿ ತೀವ್ರ ಹಲ್ಲೆ

ಸೋಷಿಯಲ್‌ ಮೀಡಿಯಾದಲ್ಲಿ ಹಂಚಿಕೊಳ್ಳಿ