ಒಳಗೇನಿದೆ!?

ಬೆಂಗಳೂರಿನ ಪಂಚತಾರಾ ಹೋಟೆಲ್ ಈಜು ಕೊಳದಲ್ಲಿ ವಿದ್ಯುತ್ ಸ್ಪರ್ಶ: ವಿದೇಶಿಗರಿಬ್ಬರ ಸಾವು

ಸಾಂಕೇತಿಕ ಎಐ ಚಿತ್ರ

ಹೋಟೆಲ್‌ ಕನ್ನಡ, ಬೆಂಗಳೂರು: ರಾಜಧಾನಿ ಬೆಂಗಳೂರಿನ ಪ್ರತಿಷ್ಠಿತ ಪಂಚತಾರಾ ಹೋಟೆಲ್‌ನ ಈಜುಕೊಳದಲ್ಲಿ ವಿದ್ಯುತ್ ಸ್ಪರ್ಶದಿಂದ ಇಬ್ಬರು ವಿದೇಶಿ ಪ್ರಜೆಗಳು ಸಾವಿಗೀಡಾಗಿದ್ದು, ಮತ್ತಿಬ್ಬರು ಗಾಯಗೊಂಡಿರುವ ಆಘಾತಕಾರಿ ಘಟನೆ ಶುಕ್ರವಾರ ಸಂಜೆ ನಡೆದಿದೆ.

ನಗರದ ಹಲಸೂರು ಸಮೀಪದ ಹಿಲ್ಟನ್ ಸಮೂಹದ ಕಾನ್ರಾಡ್ (Conrad) ಐಷಾರಾಮಿ ಹೋಟೆಲ್‌ನಲ್ಲಿ ಈ ದುರಂತ ಸಂಭವಿಸಿದೆ. ಮೃತರನ್ನು ಜರ್ಮನಿ ಮೂಲದ ಅಲೆಕ್ಸಾಂಡರ್ ಮ್ಯಾಕ್ಸಿಮಿಲಿಯನ್ ಥೈಸ್ (57) ಮತ್ತು ಸ್ಲೊವೇಕಿಯಾ ಮೂಲದ ಜುರಾಜ್ ಹೊರ್ವತ್ (45) ಎಂದು ಗುರುತಿಸಲಾಗಿದೆ.

ಅಲೆಕ್ಸಾಂಡರ್ ಲುಫ್ಥಾನ್ಸಾ ಏರ್‌ಲೈನ್ಸ್‌ನಲ್ಲಿ ಸಿಬ್ಬಂದಿ ಆಗಿದ್ದರು, ಜುರಾಜ್ ಹೊರ್ವತ್ ಐಟಿ ದೈತ್ಯ ಸಂಸ್ಥೆ ಐಬಿಎಂನಲ್ಲಿ ಪ್ರಾಜೆಕ್ಟ್ ಮ್ಯಾನೇಜರ್ ಆಗಿ ಕಾರ್ಯನಿರ್ವಹಿಸುತ್ತಿದ್ದರು.

ಇದೂ ಓದಿ: ಬಿಲ್‌ನಲ್ಲಿ ಸೇವಾ ಶುಲ್ಕ ಸೇರಿಸಿದ ರೆಸ್ಟೋರೆಂಟ್‌ಗೆ 1 ಲಕ್ಷ ರೂಪಾಯಿ ದಂಡ ವಿಧಿಸಿದ ಸಿಸಿಪಿಎ

ರಕ್ಷಣೆಗೆ ಧಾವಿಸಿದವರಿಗೂ ಗಾಯ: ಹೋಟೆಲ್‌ನ ಮೂರನೇ ಮಹಡಿಯಲ್ಲಿರುವ ಈಜುಕೊಳಕ್ಕೆ ಶುಕ್ರವಾರ ಸಂಜೆ ಇಬ್ಬರೂ ಈಜಲು ತೆರಳಿದ್ದರು. ಈ ವೇಳೆ ಕೊಳದಿಂದ ಹೊರಬರಲು ಯತ್ನಿಸುತ್ತಿದ್ದಾಗ ವಿದ್ಯುತ್ ಪ್ರವಹಿಸಿ ಇಬ್ಬರೂ ಮುಳುಗಿದ್ದಾರೆ ಎನ್ನಲಾಗಿದೆ. ಸಂಕಷ್ಟದಲ್ಲಿದ್ದವರನ್ನು ರಕ್ಷಿಸಲು ಈಜುಕೊಳಕ್ಕೆ ಧುಮುಕಿದ ಅಮೆರಿಕ ಪ್ರಜೆ ಮ್ಯಾಥ್ಯೂ ಡೆಸಾಂಟಿಸ್ (41) ಹಾಗೂ ಹೋಟೆಲ್ ಸಿಬ್ಬಂದಿ ರಾಹುಲ್ ತಿವಾರಿ (28) ಎಂಬುವವರಿಗೂ ಶಾಕ್ ತಗುಲಿ ಗಾಯಗಳಾಗಿವೆ.

ಇದೂ ಓದಿ: ಹೋಟೆಲಿಗರ ಹಣಕಾಸು ಗುಟ್ಟು, ಸ್ವಿಗ್ಗಿ-ಜೊಮ್ಯಾಟೊ ಕೈಯೊಳಗಿನ ಜುಟ್ಟು!: ಭಾರಿ ವಂಚನೆ ಬಹಿರಂಗ

ಕೂಡಲೇ ನಾಲ್ವರನ್ನೂ ಮಣಿಪಾಲ್ ಆಸ್ಪತ್ರೆಗೆ ದಾಖಲಿಸಲಾಯಿತು. ಆದರೆ ಆಸ್ಪತ್ರೆಗೆ ತರುವಷ್ಟರಲ್ಲೇ ಜರ್ಮನ್ ಪ್ರಜೆ ಅಲೆಕ್ಸಾಂಡರ್ ಮೃತಪಟ್ಟಿದ್ದರು. ಸ್ಲೊವೇಕಿಯಾದ ಜುರಾಜ್ ಅವರಿಗೆ ಸಿಪಿಆರ್ ನೀಡಿ ಉಳಿಸಿಕೊಳ್ಳಲು ವೈದ್ಯರು ಪ್ರಯತ್ನಿಸಿದರೂ ಚಿಕಿತ್ಸೆ ಫಲಕಾರಿಯಾಗದೆ ಸಾವಿಗೀಡಾದರು.

ಇದೂ ಓದಿ: ಕನಿಷ್ಠ ವೇತನ ಕುರಿತ ಹೊಸ ಆದೇಶ ಹಿಂಪಡೆಯುವಂತೆ ಬೆಂಗಳೂರು ಹೋಟೆಲುಗಳ ಸಂಘದ ಆಗ್ರಹ

ರಕ್ಷಣೆಗೆ ಮುಂದಾಗಿದ್ದ ಅಮೆರಿಕದ ಪ್ರಜೆ ಹಾಗೂ ಹೋಟೆಲ್ ಸಿಬ್ಬಂದಿ ಚೇತರಿಸಿಕೊಳ್ಳುತ್ತಿದ್ದು, ಪ್ರಾಣಾಪಾಯದಿಂದ ಪಾರಾಗಿದ್ದಾರೆ ಎಂದು ವೈದ್ಯರು ತಿಳಿಸಿದ್ದಾರೆ.

ಇದೂ ಓದಿ: ಹೋಟೆಲ್-ರೆಸ್ಟೋರೆಂಟ್​ ಬಿಲ್‌ನಲ್ಲಿ ‘ಗ್ಯಾಸ್ ಶುಲ್ಕ’ ವಿಧಿಸುವಂತಿಲ್ಲ: ಸಿಸಿಪಿಎ ಖಡಕ್ ಎಚ್ಚರಿಕೆ

ದೂರು ದಾಖಲು: ಹೋಟೆಲ್ ವಿರುದ್ಧ ದೂರು ದಾಖಲು ಮೃತ ಅಲೆಕ್ಸಾಂಡರ್ ಅವರ ಪತ್ನಿ ಸಿಲ್ವಿಯಾ ಒಟ್ಟಾವಾ ಅವರು ಹೋಟೆಲ್ ಆಡಳಿತ ಮಂಡಳಿ ವಿರುದ್ಧ ಪೊಲೀಸರಿಗೆ ದೂರು ನೀಡಿದ್ದಾರೆ. ಈಜುಕೊಳದ ಸೂಕ್ತ ನಿರ್ವಹಣೆ ಮಾಡದ್ದಕ್ಕೇ ಈ ಸಾವುಗಳು ಸಂಭವಿಸಿವೆ ಎಂದು ಆರೋಪಿಸಲಾಗಿದ್ದು, ಪೊಲೀಸರು ಪ್ರಕರಣ ದಾಖಲಿಸಿಕೊಂಡು ತನಿಖೆ ಆರಂಭಿಸಿದ್ದಾರೆ.

ಇದೂ ಓದಿ: ಹತ್ತು ಲಕ್ಷ ರೂ. ಮೌಲ್ಯದ ಚಿನ್ನದ ಸರ ಗ್ರಾಹಕರಿಗೆ ಮರಳಿಸಿ ಪ್ರಾಮಾಣಿಕತೆ ಮೆರೆದ ಹೋಟೆಲ್‌ ಕಾರ್ಮಿಕ

ದುರಂತದ ಬೆನ್ನಲ್ಲೇ ಹೋಟೆಲ್ ವೆಬ್‌ಸೈಟ್‌ನಲ್ಲಿ ಅ.31ರಿಂದ ನ. 30ರವರೆಗೆ ಈಜುಕೊಳವನ್ನು ನಿರ್ವಹಣೆಗಾಗಿ ಮುಚ್ಚಲಾಗಿದೆ ಎಂದು ನೋಟಿಸ್ ಪ್ರಕಟಿಸಲಾಗಿದೆ. ಘಟನೆ ಸಂಬಂಧ ಸಂತಾಪ ಸೂಚಿಸಿರುವ ಕಾನ್ರಾಡ್ ಹೋಟೆಲ್ ಆಡಳಿತ ಮಂಡಳಿ, ತನಿಖೆಗೆ ಸಂಪೂರ್ಣ ಸಹಕಾರ ನೀಡುವುದಾಗಿ ಹೇಳಿಕೆ ನೀಡಿದೆ.

ಇದೂ ಓದಿ: ಮತ್ತದೇ ಬೇಸರ.. ಮನಸು ಗಾಂಧಿಬಜಾರು.. ಮರಳೀತೇ ನಿತ್ಯೋತ್ಸವ?

ಇದೂ ಓದಿ: ಈ ತಿಂಗಳಾಂತ್ಯದಲ್ಲೇ ಫುಡ್ ಡೆಲಿವರಿ ಕ್ಷೇತ್ರಕ್ಕೆ ಫ್ಲಿಪ್‌ಕಾರ್ಟ್ ಲಗ್ಗೆ?: ಜೊಮ್ಯಾಟೊ-ಸ್ವಿಗ್ಗಿಗೆ ಸವಾಲು..

ಇದೂ ಓದಿ: ದಿಗ್ಗಜ ಹೋಟೆಲಿಗರಿಗೂ ತಿಳಿಯಲಾಗಲಿಲ್ಲ ಇದೊಂದು ರಹಸ್ಯ!; ಕೆಲವು ಹೋಟೆಲ್‌ಗಳಲ್ಲಿದೆಯಾ ‘ಸ್ಥಳ ಮಹಿಮೆʼ?

ಸೋಷಿಯಲ್‌ ಮೀಡಿಯಾದಲ್ಲಿ ಹಂಚಿಕೊಳ್ಳಿ