ಹೋಟೆಲ್ ಕನ್ನಡ, ಬೆಂಗಳೂರು: ದಕ್ಷಿಣ ಭಾರತದ ಪ್ರಸಿದ್ಧ ಆಹಾರ ಬ್ರ್ಯಾಂಡ್ ಆಗಿರುವ ‘ಅಡ್ಯಾರ್ ಆನಂದ ಭವನ್’ (A2B) ಸಂಸ್ಥೆಯನ್ನು ಜಾಗತಿಕ ಮಟ್ಟದಲ್ಲಿ ಬೆಳೆಸುವ ನಿಟ್ಟಿನಲ್ಲಿ ‘ಬೋಧಿ ಟ್ರೀ ಸಿಸ್ಟಮ್ಸ್’ (Bodhi Tree Systems) ಜೊತೆ ಮಹತ್ವದ ಪಾಲುದಾರಿಕೆ ಘೋಷಿಸಲಾಗಿದೆ.
ಜೇಮ್ಸ್ ಮುರ್ಡೋಕ್ ಮತ್ತು ಉದಯ್ ಶಂಕರ್ ನೇತೃತ್ವದ ಬೋಧಿ ಟ್ರೀ ಸಂಸ್ಥೆಯು ಅಡ್ಯಾರ್ ಆನಂದ ಭವನದಲ್ಲಿ ಬಹುಪಾಲು ಷೇರುಗಳನ್ನು ಹೊಂದಲು 180 ದಶಲಕ್ಷ ಡಾಲರ್, ಅಂದರೆ ಸುಮಾರು 1,695 ಕೋಟಿ ರೂಪಾಯಿ ಹೂಡಿಕೆ ಮಾಡಿದೆ.
ಇದೂ ಓದಿ: 12 ಸಿಬ್ಬಂದಿಗೆ ಕಾರು, 25 ಮಂದಿಗೆ ದ್ವಿಚಕ್ರ ವಾಹನ ಉಡುಗೊರೆ ನೀಡಿದ ಹೋಟೆಲೋದ್ಯಮಿ!
A2B ದಕ್ಷಿಣ ಭಾರತದ ಪ್ರಮುಖ ಕ್ಯಾಸುವಲ್ ಡೈನಿಂಗ್ ಮತ್ತು ಪ್ಯಾಕೇಜ್ಡ್ ಸಿಹಿತಿಂಡಿಗಳ ಬ್ರ್ಯಾಂಡ್ ಆಗಿದ್ದು, ತಮಿಳುನಾಡು ಮತ್ತು ಕರ್ನಾಟಕದಲ್ಲಿ ಬಲವಾದ ನೆಲೆ ಹೊಂದಿದೆ.
ಇದೂ ಓದಿ: ವಿಶ್ವ ಕುಂದಾಪ್ರ ಕನ್ನಡ ಹಬ್ಬಕ್ಕೆ ಮತ್ತೆ ʼಅರಮನೆʼಯ ರಾಜ ವೈಭೋಗ; ಕಾರಣಕರ್ತರಿವರು..
ಈ ಸಂಸ್ಥೆ ಭಾರತದಾದ್ಯಂತ 160 ಮಳಿಗೆಗಳನ್ನು ಹಾಗೂ ಅಂತಾರಾಷ್ಟ್ರೀಯ ಮಟ್ಟದಲ್ಲಿ 30ಕ್ಕೂ ಹೆಚ್ಚು ಮಳಿಗೆಗಳನ್ನು ಹೊಂದಿದ್ದು, 15,000ಕ್ಕೂ ಹೆಚ್ಚು ಉದ್ಯೋಗಿಗಳಿಗೆ ಕೆಲಸ ನೀಡಿದೆ.
ಇದೂ ಓದಿ: ಹತ್ತು ಲಕ್ಷ ರೂ. ಮೌಲ್ಯದ ಚಿನ್ನದ ಸರ ಗ್ರಾಹಕರಿಗೆ ಮರಳಿಸಿ ಪ್ರಾಮಾಣಿಕತೆ ಮೆರೆದ ಹೋಟೆಲ್ ಕಾರ್ಮಿಕ
ಬೋಧಿ ಟ್ರೀ ಸಿಸ್ಟಮ್ಸ್ನ ಸಹ-ಸಂಸ್ಥಾಪಕರಾದ ಜೇಮ್ಸ್ ಮುರ್ಡೋಕ್ ಮತ್ತು ಉದಯ್ ಶಂಕರ್ ಅವರು ಎಟುಬಿ ಸಹ-ಸಂಸ್ಥಾಪಕರಾದ ಕೆ.ಟಿ.ಶ್ರೀನಿವಾಸ ರಾಜ ಮತ್ತು ಕೆ.ಟಿ. ವೆಂಕಟೇಶನ್ ಅವರೊಂದಿಗೆ ಈ ಪಾಲುದಾರಿಕೆ ಹೊಂದಿದ್ದು, ಬ್ರ್ಯಾಂಡನ್ನು ಜಾಗತಿಕ ಮಟ್ಟಕ್ಕೆ ಕೊಂಡೊಯ್ಯುವ ಗುರಿ ಹೊಂದಿದ್ದಾರೆ.
ಇದೂ ಓದಿ: ಹೋಟೆಲ್ ಮಾಲೀಕರ ಖಾತೆಗೆ ಜಮೆ ಆಯ್ತು ಲಕ್ಷ ಲಕ್ಷ ಹಣ; ಒಟ್ಟು 3 ಕೋಟಿ ರೂಪಾಯಿಗೂ ಅಧಿಕ ಸಂದಾಯ
ಸಿಂಗಾಪುರ, ಅಮೆರಿಕ, ಆಸ್ಟ್ರೇಲಿಯಾ, ಮಲೇಷ್ಯಾ ಮತ್ತು ಬ್ರಿಟನ್ನಲ್ಲಿರುವ ಎಟುಬಿ ಕಾರ್ಯಾಚರಣೆಯ ಬಗ್ಗೆ ಬೋಧಿ ಟ್ರೀ ಸಂಸ್ಥಾಪಕರು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.
ಇದೂ ಓದಿ: ಎಫ್ಕೆಸಿಸಿಐ ಚುನಾವಣೆಯಲ್ಲಿ ಆತಿಥ್ಯ ಕ್ಷೇತ್ರದ ನಾಲ್ವರು ನಿರ್ದೇಶಕರಾಗಿ ಆಯ್ಕೆ
ಈ ನೂತನ ಒಪ್ಪಂದದ ಬಳಿಕ ಎಟುಬಿಯ ಹೊಸ ನಿರ್ದೇಶಕರ ಮಂಡಳಿಯ (Board of Directors) ಅಧ್ಯಕ್ಷರಾಗಿ ಉದಯ್ ಶಂಕರ್ ಕಾರ್ಯನಿರ್ವಹಿಸಲಿದ್ದಾರೆ.
ಇದೂ ಓದಿ: ಈ ತಿಂಗಳಾಂತ್ಯದಲ್ಲೇ ಫುಡ್ ಡೆಲಿವರಿ ಕ್ಷೇತ್ರಕ್ಕೆ ಫ್ಲಿಪ್ಕಾರ್ಟ್ ಲಗ್ಗೆ?: ಜೊಮ್ಯಾಟೊ-ಸ್ವಿಗ್ಗಿಗೆ ಸವಾಲು..
ಇದೂ ಓದಿ: ಬೆಂಗಳೂರು ಹೋಟೆಲುಗಳ ಸಂಘದ ಸದಸ್ಯತ್ವ ಪಡೆಯುವುದು ಹೇಗೆ? ಅದಕ್ಕೆಂದೇ ಮಾಡಲಾಗಿದೆ ಹೊಸ ಸಮಿತಿ
ಇದೂ ಓದಿ: ಕಾವೇರಿ ಕಾರ್ಸ್@34: ಒಂದು ಲ್ಯಾಂಡ್ಲೈನ್ನಿಂದ ಆರಂಭ, ಇಂದು ಪ್ರತಿಷ್ಠಿತ ಕಾರ್ಪೋರೇಟ್ ಸಾರಿಗೆ ಸೇವಾ ಸಂಸ್ಥೆ



