ಹೋಟೆಲ್ ಕನ್ನಡ, ಬೆಂಗಳೂರು: ಆತಿಥ್ಯ ಕ್ಷೇತ್ರದ ಮಹತ್ವದ ಸಂಘಟನೆಯಾದ ನ್ಯಾಷನಲ್ ರೆಸ್ಟೋರೆಂಟ್ ಅಸೋಸಿಯೇಷನ್ ಆಫ್ ಇಂಡಿಯಾ (ಎನ್ಆರ್ಎಐ) ಬೆಳಗಾವಿಯಲ್ಲಿ ತನ್ನ ಹೊಸ ಶಾಖೆಯನ್ನು ಶೀಘ್ರದಲ್ಲೇ ಆರಂಭಿಸಲಿದೆ.
ಇದೂ ಓದಿ: ಈ ತಿಂಗಳಾಂತ್ಯದಲ್ಲೇ ಫುಡ್ ಡೆಲಿವರಿ ಕ್ಷೇತ್ರಕ್ಕೆ ಫ್ಲಿಪ್ಕಾರ್ಟ್ ಲಗ್ಗೆ?: ಜೊಮ್ಯಾಟೊ-ಸ್ವಿಗ್ಗಿಗೆ ಸವಾಲು..
ಇದೇ ನವೆಂಬರ್ 19ರಂದು ಎನ್ಆರ್ಐಎ ಬೆಳಗಾವಿ ಚಾಪ್ಟರ್ ಉದ್ಘಾಟಿಸಲಾಗುವುದು ಎಂದು ಎನ್ಆರ್ಐಎ ಪ್ರಕಟಿಸಿದೆ.. ಆಹಾರ ಸೇವೆ ಮತ್ತು ಹೋಟೆಲ್ ಉದ್ಯಮವನ್ನು ಒಂದೇ ವೇದಿಕೆಯಡಿ ತಂದು ಪರಸ್ಪರ ಸಂಪರ್ಕ, ಸಹಕಾರ, ಬೆಳವಣಿಗೆ ಮತ್ತು ಉದ್ಯಮದ ಹಿತರಕ್ಷಣೆ ಸಲುವಾಗಿ ಈ ಹೆಜ್ಜೆ ಇಡಲಾಗಿದೆ ಎಂಬುದಾಗಿ ಎನ್ಆರ್ಐಎ ತಿಳಿಸಿದೆ.
ಇದೂ ಓದಿ: ಹತ್ತು ಲಕ್ಷ ರೂ. ಮೌಲ್ಯದ ಚಿನ್ನದ ಸರ ಗ್ರಾಹಕರಿಗೆ ಮರಳಿಸಿ ಪ್ರಾಮಾಣಿಕತೆ ಮೆರೆದ ಹೋಟೆಲ್ ಕಾರ್ಮಿಕ
ಬೆಳಗಾವಿಯ ರೆಸ್ಟೋರೆಂಟ್ ಸಮುದಾಯವನ್ನು ಬಲಪಡಿಸಲು ಮತ್ತು ಈ ಉದ್ಯಮದಲ್ಲಿ ಹೊಸ ಅವಕಾಶಗಳನ್ನು ಸೃಷ್ಟಿಸಲು ಆಯೋಜಿಸಲಾಗಿರುವ ಈ ವಿಶೇಷ ಕಾರ್ಯಕ್ರಮ ಬೆಳಗಾವಿಯ ದಿ ಫರ್ನ್ಸ್-ಯುಕೆ27ನಲ್ಲಿ ನ.19ರ ಗುರುವಾರ ಸಂಜೆ 6.30ಕ್ಕೆ ಆರಂಭವಾಗಲಿದೆ. ಈ ಕಾರ್ಯಕ್ರಮಕ್ಕೆ ʼಮ್ಯಾಗ್ನೆಟಾ ಹಮಾರಾ ಐಸ್ ಕ್ರೀಮ್ʼ ಸಹ-ಪ್ರಾಯೋಜಕತ್ವ ಇದೆ.

ಇದೂ ಓದಿ: ಬಿಲ್ನಲ್ಲಿ ಸೇವಾ ಶುಲ್ಕ ಸೇರಿಸಿದ ರೆಸ್ಟೋರೆಂಟ್ಗೆ 1 ಲಕ್ಷ ರೂಪಾಯಿ ದಂಡ ವಿಧಿಸಿದ ಸಿಸಿಪಿಎ
ಇದೂ ಓದಿ: ಕಾವೇರಿ ಕಾರ್ಸ್@34: ಒಂದು ಲ್ಯಾಂಡ್ಲೈನ್ನಿಂದ ಆರಂಭ, ಇಂದು ಪ್ರತಿಷ್ಠಿತ ಕಾರ್ಪೋರೇಟ್ ಸಾರಿಗೆ ಸೇವಾ ಸಂಸ್ಥೆ
ಇದೂ ಓದಿ: ಹೋಟೆಲಿಗರ ಹಣಕಾಸು ಗುಟ್ಟು, ಸ್ವಿಗ್ಗಿ-ಜೊಮ್ಯಾಟೊ ಕೈಯೊಳಗಿನ ಜುಟ್ಟು!: ಭಾರಿ ವಂಚನೆ ಬಹಿರಂಗ



