ಹೋಟೆಲ್ ಕನ್ನಡ, ಬೆಂಗಳೂರು: ಬೆಂಗಳೂರು ಹೋಟೆಲುಗಳ ಸಂಘವು ಹೋಟೆಲ್ ಉದ್ಯಮದಲ್ಲಿ ವಿಶೇಷ ಸೇವೆ ಸಲ್ಲಿಸಿರುವ ಹಿರಿಯ ಸದಸ್ಯರಿಗೆ ನೀಡುವ ʼಉದ್ಯಮ ಚೇತನʼ ಪ್ರಶಸ್ತಿಗೆ ಹೋಟೆಲೋದ್ಯಮಿ ಎಚ್.ಬಿ.ರಾಜೀವ ಶೆಟ್ಟಿ ಅವರು ಭಾಜನರಾಗಿದ್ದಾರೆ.
ರಾಜಧಾನಿ ಬೆಂಗಳೂರಿನ ಕೆ.ಜಿ.ರಸ್ತೆಯ ʼಬೆಂಗಳೂರು ಗೇಟ್ʼ ಹೋಟೆಲ್ನಲ್ಲಿ ನ.13ರಂದು ನಡೆದ ಬೆಂಗಳೂರು ಹೋಟೆಲುಗಳ ಸಂಘದ 91ನೇ ವಾರ್ಷಿಕ ಸರ್ವಸದಸ್ಯರ ಸಭೆಯ ಸಂದರ್ಭದಲ್ಲಿ ಬೆಂಗಳೂರು ನಗರದ ಮಾಜಿ ಪೊಲೀಸ್ ಆಯುಕ್ತರಾದ ಭಾಸ್ಕರ್ ರಾವ್ ಅವರು ಎಚ್.ಬಿ.ರಾಜೀವ ಶೆಟ್ಟಿ ಅವರಿಗೆ ʼಉದ್ಯಮ ಚೇತನʼ ಪ್ರಶಸ್ತಿ ಪ್ರದಾನ ಮಾಡಿದರು.
ಇದೂ ಓದಿ: ಹೋಟೆಲ್ ಕನ್ನಡ: ಇದು ಕನ್ನಡಿಗ, ಕರ್ನಾಟಕದ ಹೋಟೆಲಿಗರ ಸುದ್ದಿದರ್ಶಿನಿ
ಹರ್ಕಾಡಿ ದೊಡ್ಡಮನೆ ರಾಧಮ್ಮ ಶೆಡ್ತಿ ಮತ್ತು ಕೋಟ ಕಾರ್ತಟ್ಟು ಬಸವ ಶೆಟ್ಟಿ ಅವರ ಪುತ್ರರಾಗಿರುವ ರಾಜೀವ ಶೆಟ್ಟಿಯವರು ಹೋಟೆಲ್ ಉದ್ಯಮದಲ್ಲಿ 50 ವರ್ಷಗಳಿಂದ ಸಕ್ರಿಯರಾಗಿದ್ದು, ಹೋಟೆಲ್ ಕ್ಷೇತ್ರದಲ್ಲಿನ ಅವರ ಸಾಧನೆ, ಉದ್ಯಮ ಕ್ಷೇತ್ರಕ್ಕೆ ಅವರು ನೀಡಿ ಕೊಡುಗೆಯನ್ನು ಗುರುತಿಸಿ ಗೌರವಿಸುವ ಸಲುವಾಗಿ ಬೆಂಗಳೂರು ಹೋಟೆಲುಗಳ ಸಂಘವು ಅವರನ್ನು ಈ ಪ್ರಶಸ್ತಿಗೆ ಪರಿಗಣಿಸಿದೆ.
ಇದೂ ಓದಿ: ವಿಶ್ವ ಕುಂದಾಪ್ರ ಕನ್ನಡ ಹಬ್ಬಕ್ಕೆ ಮತ್ತೆ ʼಅರಮನೆʼಯ ರಾಜ ವೈಭೋಗ; ಕಾರಣಕರ್ತರಿವರು..
ಬೆಂಗಳೂರು ಹೊಟೇಲುಗಳ ಸಂಘದಲ್ಲಿ ಹತ್ತು ವರ್ಷಗಳ ಕಾಲ ಕಾರ್ಯಕಾರಿ ಸಮಿತಿ ಸದಸ್ಯರಾಗಿರುವುದಲ್ಲದೆ, ಹತ್ತು ವರ್ಷಗಳ ಕಾಲ ಉಪಾಧ್ಯಕ್ಷರಾಗಿಯೂ ಕಾರ್ಯನಿರ್ವಹಿಸಿರುತ್ತಾರೆ. ಅಲ್ಲದೆ, ಹೋಟೆಲ್ ಉದ್ಯಮದಾರರ ಸಹಕಾರ ಬ್ಯಾಂಕಿನಲ್ಲಿ ಹಾಲಿ ನಿರ್ದೇಶಕರೂ ಆಗಿರುತ್ತಾರೆ.

ಇದೂ ಓದಿ: ಕರ್ನಾಟಕದ ಹೋಟೆಲೋದ್ಯಮ ಭಾರತಕ್ಕೆ ಮಾದರಿ: ಮಾಜಿ ಪೊಲೀಸ್ ಆಯುಕ್ತ ಭಾಸ್ಕರ್ ರಾವ್
ದಂಡು ಪ್ರದೇಶ ಕನ್ನಡ ಸಂಘಟನೆಗಳ ಒಕ್ಕೂಟದ ಉಪಾಧ್ಯಕ್ಷ, ಕನ್ನಡ ಸರ್ವೋದಯ ಸಂಘ ಮಾರುತಿ ಸೇವಾನಗರದ ಅಧ್ಯಕ್ಷ, ದಕ್ಷಿಣಕನ್ನಡ ಕನ್ನಡಿಗರ ವೇದಿಕೆಯ ಕಾರ್ಯದರ್ಶಿ, ಬೆಂಗಳೂರು ಬಂಟರ ಸಂಘದ ಮಾಜಿ ಕಾರ್ಯಕಾರಿ ಮಂಡಳಿಯ ಸದಸ್ಯ, ಯಕ್ಷ ಕಲಾರಂಗ ಬೆಂಗಳೂರು ಇದರ ಅಧ್ಯಕ್ಷ.. ಹೀಗೆ ಹಲವಾರು ಸಂಘಟನೆಗಳಲ್ಲಿ ತೊಡಗಿಸಿಕೊಂಡು ಸೇವೆ ಸಲ್ಲಿಸಿರುತ್ತಾರೆ.
ಇದೂ ಓದಿ: ಬೆಂಗಳೂರು ಹೋಟೆಲುಗಳ ಸಂಘದಿಂದ ಜಿ.ಮಂಜುನಾಥ್ ಅವರಿಗೆ ʼಉದ್ಯಮ ಚೇತನʼ ಪ್ರಶಸ್ತಿ
ಇದೂ ಓದಿ: ಎಫ್ಕೆಸಿಸಿಐ ಚುನಾವಣೆಯಲ್ಲಿ ಆತಿಥ್ಯ ಕ್ಷೇತ್ರದ ನಾಲ್ವರು ನಿರ್ದೇಶಕರಾಗಿ ಆಯ್ಕೆ



