ಹೋಟೆಲ್ ಕನ್ನಡ, ಬೆಂಗಳೂರು: ರಾಜಧಾನಿ ಬೆಂಗಳೂರಿನಲ್ಲಿ ಸಂಭವಿಸಿದ ಭೀಕರ ರಸ್ತೆ ಅಪಘಾತದಲ್ಲಿ ಕುಂದಾಪುರ ಮೂಲದ ಹೋಟೆಲೋದ್ಯಮಿಯೊಬ್ಬರು ಸಾವಿಗೀಡಾಗಿದ್ದಾರೆ. ಉಡುಪಿ ಜಿಲ್ಲೆ ಕುಂದಾಪುರದ ಕೋಟ ಪಡುಕೆರೆಯ ಎಚ್.ವಿಶ್ವನಾಥ್ (55) ಮೃತಪಟ್ಟವರು.
ಮೂಲತಃ ಮಣೂರು-ಪಡುಕೆರೆಯ ಜಟ್ಟಿಗೇಶ್ವರ ದೇವಸ್ಥಾನ ಸಮೀಪದ ನಿವಾಸಿಯಾಗಿದ್ದ ಅವರು ಪತ್ನಿ ಹಾಗೂ ಇಬ್ಬರು ಪುತ್ರರನ್ನು ಅಗಲಿದ್ದಾರೆ. ವಿಶ್ವನಾಥ ಅವರು ಇಲ್ಲಿನ ನರಸಿಂಹ ಮೊಗವೀರ ಅವರ ಪುತ್ರ.
ಇದೂ ಓದಿ: ಹೋಟೆಲ್ ಕನ್ನಡ: ಇದು ಕನ್ನಡಿಗ, ಕರ್ನಾಟಕದ ಹೋಟೆಲಿಗರ ಸುದ್ದಿದರ್ಶಿನಿ
ಬೆಂಗಳೂರಿನ ಬಿಡದಿಯಲ್ಲಿ ‘ಕರಾವಳಿ ಕಿಚನ್’ ಹೆಸರಿನ ಹೋಟೆಲ್ ನಡೆಸುತ್ತಿದ್ದ ವಿಶ್ವನಾಥ್, ನ.19ರ ಗುರುವಾರ ರಾತ್ರಿ ಎಂದಿನಂತೆ ಹೋಟೆಲ್ ವ್ಯವಹಾರ ಮುಗಿಸಿ ಮನೆಗೆ ಮರಳುತ್ತಿದ್ದಾಗ ಈ ದುರಂತ ಸಂಭವಿಸಿದೆ. ಬೆಂಗಳೂರಿನ ಬಿಡದಿ ಸಮೀಪ ಎರಡು ಬೈಕ್‌ಗಳ ನಡುವೆ ಸಂಭವಿಸಿದ ಮುಖಾಮುಖಿ ಡಿಕ್ಕಿಯಲ್ಲಿ ಗಂಭೀರವಾಗಿ ಗಾಯಗೊಂಡು ವಿಶ್ವನಾಥ್ ಅಸುನೀಗಿದರು.
ಇದೂ ಓದಿ: ಕರ್ನಾಟಕದ ಹೋಟೆಲೋದ್ಯಮ ಭಾರತಕ್ಕೆ ಮಾದರಿ: ಮಾಜಿ ಪೊಲೀಸ್ ಆಯುಕ್ತ ಭಾಸ್ಕರ್ ರಾವ್
ಬೆಂಗಳೂರಿನಲ್ಲಿ ಶುಕ್ರವಾರ ಮರಣೋತ್ತರ ಪರೀಕ್ಷೆ ನಡೆಸಲಾಗಿದ್ದು, ಆ ಬಳಿಕ ಸಂಬಂಧಿಕರಿಗೆ ಮೃತದೇಹ ಹಸ್ತಾಂತರಿಸಲಾಗಿದೆ. ನಂತರ ಪಾರ್ಥಿವ ಶರೀರವನ್ನು ಅಂತಿಮಸಂಸ್ಕಾರಕ್ಕಾಗಿ ಊರಿಗೆ ಕಳುಹಿಸಿಕೊಡಲಾಗಿದೆ ಎಂದು ಮೂಲಗಳು ತಿಳಿಸಿವೆ.
ಇದೂ ಓದಿ: ದಿಗ್ಗಜ ಹೋಟೆಲಿಗರಿಗೂ ತಿಳಿಯಲಾಗಲಿಲ್ಲ ಇದೊಂದು ರಹಸ್ಯ!; ಕೆಲವು ಹೋಟೆಲ್‌ಗಳಲ್ಲಿದೆಯಾ ‘ಸ್ಥಳ ಮಹಿಮೆʼ?
ಕುಂದಾಪುರದ ಭಂಡಾರ್ಕಾರ್ಸ್ ಕಾಲೇಜಿನಲ್ಲಿ ಪದವಿ ಶಿಕ್ಷಣ ಪಡೆದಿದ್ದ ವಿಶ್ವನಾಥ್ ಬಳಿಕ ಬೆಂಗಳೂರಿಗೆ ಆಗಮಿಸಿ ಹೋಟೆಲ್‌ನಲ್ಲಿ ಕೆಲಸ ಮಾಡಲಾರಂಭಿಸಿದ್ದರು. ಆರಂಭದಲ್ಲಿ ಕನ್ನಿಂಗ್‌ಹ್ಯಾಂ ರಸ್ತೆಯ ರಮಣಾಸ್ ಹೋಟೆಲ್‌ನಲ್ಲಿ ಕೆಲಸ ಮಾಡುತ್ತಿದ್ದ ಅವರು, ಕ್ರಮೇಣ ಸ್ವಂತ ಹೋಟೆಲ್ ಆರಂಭಿಸಿದ್ದರು. ಉದ್ಯಮ ಕ್ಷೇತ್ರದಲ್ಲಿ ಮಾತ್ರವಲ್ಲದೆ ವೈಯಕ್ತಿಕವಾಗಿ ವಲಯದಲ್ಲೂ ವಿಶ್ವನಾಥ್ ಜನಾನುರಾಗಿ ಆಗಿದ್ದರು.
ಇದೂ ಓದಿ: ಕಾವೇರಿ ಕಾರ್ಸ್@34: ಒಂದು ಲ್ಯಾಂಡ್‌ಲೈನ್‌ನಿಂದ ಆರಂಭ, ಇಂದು ಪ್ರತಿಷ್ಠಿತ ಕಾರ್ಪೋರೇಟ್ ಸಾರಿಗೆ ಸೇವಾ ಸಂಸ್ಥೆ
ಇದೂ ಓದಿ: ಸುಖ್ ಸಾಗರ್ ಗ್ರೂಪ್ ಆಫ್ ಹೋಟೆಲ್ಸ್ ಸಂಸ್ಥಾಪಕ ಸುರೇಶ್ ಎಸ್. ಪೂಜಾರಿ ವಿಧಿವಶ
ಇದೂ ಓದಿ: ಹೋಟೆಲ್ ಉದ್ಯಮಿ, ʼವೀಣಾ ಸ್ಟೋರ್ಸ್ʼ ಸಂಸ್ಥಾಪಕ ಸೂರ್ಯನಾರಾಯಣ ಹೆಗಡೆ ವಿಧಿವಶ



