ಒಳಗೇನಿದೆ!?

ಬೆಂಗಳೂರು ಹೋಟೆಲುಗಳ ಸಂಘದಿಂದ ಕೇಶವ ಹೊಳ್ಳ ಅವರಿಗೆ ʼಉದ್ಯಮ ಚೇತನʼ ಪ್ರಶಸ್ತಿ

ಹೋಟೆಲ್‌ ಕನ್ನಡ, ಬೆಂಗಳೂರು: ಬೆಂಗಳೂರು ಹೋಟೆಲುಗಳ ಸಂಘವು ಹೋಟೆಲ್ ಉದ್ಯಮದಲ್ಲಿ ವಿಶೇಷ ಸೇವೆ ಸಲ್ಲಿಸಿರುವ ಹಿರಿಯ ಸದಸ್ಯರಿಗೆ ನೀಡುವ ʼಉದ್ಯಮ ಚೇತನʼ ಪ್ರಶಸ್ತಿಗೆ ಹೋಟೆಲೋದ್ಯಮಿ ಕೆ.ಕೇಶವ ಹೊಳ್ಳ ಅವರು ಭಾಜನರಾಗಿದ್ದಾರೆ.

ರಾಜಧಾನಿ ಬೆಂಗಳೂರಿನ ಕೆ.ಜಿ.ರಸ್ತೆಯ ʼಬೆಂಗಳೂರು ಗೇಟ್ʼ ಹೋಟೆಲ್‌ನಲ್ಲಿ ನ.13ರಂದು ನಡೆದ ಬೆಂಗಳೂರು ಹೋಟೆಲುಗಳ ಸಂಘದ 91ನೇ ವಾರ್ಷಿಕ ಸರ್ವಸದಸ್ಯರ ಸಭೆಯ ಸಂದರ್ಭದಲ್ಲಿ ಬೆಂಗಳೂರು ನಗರದ ಮಾಜಿ ಪೊಲೀಸ್ ಆಯುಕ್ತರಾದ ಭಾಸ್ಕರ್ ರಾವ್ ಅವರು ಕೆ.ಕೇಶವ ಹೊಳ್ಳ ಅವರಿಗೆ ʼಉದ್ಯಮ ಚೇತನʼ ಪ್ರಶಸ್ತಿ ಪ್ರದಾನ ಮಾಡಿದರು.

ಇದೂ ಓದಿ: ಎಫ್‌ಕೆಸಿಸಿಐ ಚುನಾವಣೆಯಲ್ಲಿ ಆತಿಥ್ಯ ಕ್ಷೇತ್ರದ ನಾಲ್ವರು ನಿರ್ದೇಶಕರಾಗಿ ಆಯ್ಕೆ

ಕೆ. ಕೇಶವ ಹೊಳ್ಳ ಅವರು ಗಡಿನಾಡು ಕಾಸರಗೋಡಿನ ಕಯ್ಯಾರು ಎಂಬ ಗ್ರಾಮದಲ್ಲಿ 1954ರಲ್ಲಿ ಜನಿಸಿದ್ದು, ಆರಂಭಿಕ ವಿದ್ಯಾಭ್ಯಾಸವನ್ನು ತಮ್ಮ ಊರಿನಲ್ಲಿ ಪೂರೈಸಿ, ನಂತರ ಬೆಂಗಳೂರಿನ ಆರ್.ವಿ. ಟೀಚರ್ಸ್ ಕಾಲೇಜಿನಲ್ಲಿ ಶಿಕ್ಷಕ ತರಬೇತಿ ಪಡೆದಿರುತ್ತಾರೆ. ಬಳಿಕ ಹೊಟೇಲು ಉದ್ಯಮದತ್ತ ಆಕರ್ಷಿತರಾಗಿ 1973ರಲ್ಲಿ ಹೋಟೆಲ್‌ ವುಡ್‌ಲ್ಯಾಂಡ್ಸ್‌ನಲ್ಲಿ ಉದ್ಯೋಗಕ್ಕೆ ಸೇರಿಕೊಂಡರು.

ಇದೂ ಓದಿ: ಹೋಟೆಲ್‌ ಕನ್ನಡ: ಇದು ಕನ್ನಡಿಗ, ಕರ್ನಾಟಕದ ಹೋಟೆಲಿಗರ ಸುದ್ದಿದರ್ಶಿನಿ

ವುಡ್‌ಲ್ಯಾಂಡ್ಸ್‌ ಹೋಟೆಲ್‌ನಲ್ಲಿ ಹಲವಾರು ವರ್ಷಗಳ ಕಾಲ ಕೇಟರಿಂಗ್ ವಿಭಾಗದ ಉಸ್ತುವಾರಿಯಾಗಿ ಕಾರ್ಯನಿರ್ವಹಿಸಿದ ಕೇಶವ ಹೊಳ್ಳ ಅವರು ಹೊಟೇಲು ಉದ್ಯಮದಲ್ಲಿ ಹೆಚ್ಚಿನ ಅನುಭವ ಪಡೆದರು. ನಂತರ ಬೆಂಗಳೂರಿನ ಕಬ್ಬನ್‌ಪೇಟೆ ರಸ್ತೆಯಲ್ಲಿ 1981ರಲ್ಲಿ ತಮ್ಮದೇ ‘ಕಾವೇರಿʼ ಎಂಬ ಉಪಾಹಾರ ಗೃಹ ಪ್ರಾರಂಭಿಸಿದರು. ನಾಲ್ಕು ದಶಕಗಳ ಕಾಲ ಕಾರ್ಯನಿರ್ವಹಿಸಿದ ಈ ಹೋಟೆಲ್‌ ಶುಚಿ-ರುಚಿಯಾದ ಆಹಾರ ಪದಾರ್ಥಗಳಿಂದ ಗ್ರಾಹಕರ ನೆಚ್ಚಿನ ಉಪಹಾರ ಗೃಹವಾಗಿತ್ತು.

ಇದೂ ಓದಿ: ಎಫ್‌ಕೆಸಿಸಿಐ ಪ್ರವಾಸೋದ್ಯಮ ಸಮಿತಿ ಅಧ್ಯಕ್ಷರಾಗಿ ಕೆ. ರಾಧಾಕೃಷ್ಣ ಹೊಳ್ಳ ನೇಮಕ

ಹೊಟೇಲ್ ಉದ್ಯಮದ ಜೊತೆಗೆ ಸಂಘ-ಸಂಸ್ಥೆಗಳಲ್ಲಿ ಹಾಗೂ ದೇವಸ್ಥಾನದ ಜೀರ್ಣೋದ್ಧಾರ ಕೆಲಸಗಳಲ್ಲಿ ತೊಡಗಿಸಿಕೊಂಡಿರುವುದು ಕೇಶವ ಹೊಳ್ಳ ಅವರ ವಿಶೇಷತೆ.  ಬೆಂಗಳೂರು ಹೋಟೆಲುಗಳ ಸಂಘದ ಪದಾಧಿಕಾರಿಯಾಗಿ, ಕಾರ್ಯಕಾರಿ ಸಮಿತಿ ಸದಸ್ಯರಾಗಿ ಬಹಳಷ್ಟು ವರ್ಷಗಳ ಕಾಲ ಸಕ್ರಿಯರಾಗಿದ್ದರು. 

ಇದೂ ಓದಿ: ಕರ್ನಾಟಕದ ಹೋಟೆಲೋದ್ಯಮ ಭಾರತಕ್ಕೆ ಮಾದರಿ: ಮಾಜಿ ಪೊಲೀಸ್‌ ಆಯುಕ್ತ ಭಾಸ್ಕರ್‌ ರಾವ್‌

ಬೆಂಗಳೂರು ಹೋಟೆಲುಗಳ ಸಂಘದಿಂದ ಕೇಶವ ಹೊಳ್ಳ ಅವರಿಗೆ ಉದ್ಯಮ ಚೇತನ ಪ್ರಶಸ್ತಿ ಪ್ರದಾನ.

ಬೆಂಗಳೂರು ಹೋಟೆಲುಗಳ ಸಂಘದ 75ನೇ ಸುವರ್ಣ ಮಹೋತ್ಸವದ ಸಂದರ್ಭದಲ್ಲಿ ಜಂಟಿ ಕಾರ್ಯದರ್ಶಿಯಾಗಿ ಕಾರ್ಯಕ್ರಮದ ಯಶಸ್ಸಿಗೆ ಕಾರಣಕರ್ತರಾಗಿದ್ದಾರೆ. ಸಂಘದ ಮಾಜಿ ಅಧ್ಯಕ್ಷರಾದ ಚಂದ್ರಶೇಖರ ಹೆಬ್ಬಾರ್‌ ಅವರ ಅವಧಿಯಲ್ಲಿ ಕೇಶವ ಹೊಳ್ಳ ಅವರು ಬಹಳಷ್ಟು ಸಕ್ರಿಯರಾಗಿ ಸಂಘಕ್ಕೆ ವಿಶೇಷ ಸೇವೆ ಸಲ್ಲಿಸಿರುತ್ತಾರೆ.

ಇದೂ ಓದಿ: ಕಾವೇರಿ ಕಾರ್ಸ್‌@34: ಒಂದು ಲ್ಯಾಂಡ್‌ಲೈನ್‌ನಿಂದ ಆರಂಭ, ಇಂದು ಪ್ರತಿಷ್ಠಿತ ಕಾರ್ಪೋರೇಟ್‌ ಸಾರಿಗೆ ಸೇವಾ ಸಂಸ್ಥೆ

ಕೇಶವ ಹೊಳ್ಳ ಅವರು ಕರ್ನಾಟಕ ರಾಜ್ಯ ಟ್ರಾವೆಲ್‌ ಆಪರೇಟರುಗಳ ಸಂಘದ ಅಧ್ಯಕ್ಷ, ಕರ್ನಾಟಕ ವಾಣಿಜ್ಯ ಮತ್ತು ಕೈಗಾರಿಕಾ ಮಹಾಸಂಸ್ಥೆ (ಎಫ್‌ಕೆಸಿಸಿಐ) ನಿರ್ದೇಶಕ ಹಾಗೂ ಕರ್ನಾಟಕ ಟೂರಿಸಂ ಸೊಸೈಟಿಯ ಕಾರ್ಯಕಾರಿ ಸಮಿತಿ ಸದಸ್ಯರೂ ಆಗಿರುವ ಕೆ.ರಾಧಾಕೃಷ್ಣ ಹೊಳ್ಳ ಅವರ ಸಹೋದರ.

ಇದೂ ಓದಿ: ದಿಗ್ಗಜ ಹೋಟೆಲಿಗರಿಗೂ ತಿಳಿಯಲಾಗಲಿಲ್ಲ ಇದೊಂದು ರಹಸ್ಯ!; ಕೆಲವು ಹೋಟೆಲ್‌ಗಳಲ್ಲಿದೆಯಾ ‘ಸ್ಥಳ ಮಹಿಮೆʼ?

ಇದೂ ಓದಿ: ಸೌಟು ಹಿಡಿದಿದ್ದ ಕೈಯಲ್ಲೀಗ ಬೃಹತ್‌ ಸಾರಿಗೆ ಸಂಘಟನೆಯ ಸ್ಟೇರಿಂಗ್!

ಇದೂ ಓದಿ: ಹತ್ತು ಲಕ್ಷ ರೂ. ಮೌಲ್ಯದ ಚಿನ್ನದ ಸರ ಗ್ರಾಹಕರಿಗೆ ಮರಳಿಸಿ ಪ್ರಾಮಾಣಿಕತೆ ಮೆರೆದ ಹೋಟೆಲ್‌ ಕಾರ್ಮಿಕ

ಸೋಷಿಯಲ್‌ ಮೀಡಿಯಾದಲ್ಲಿ ಹಂಚಿಕೊಳ್ಳಿ